‘ಜುಲೈನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿಶ್ವಾಮಿತ್ರಿ ನದಿಯ ಎರಡೂ ಬದಿಯಲ್ಲಿ ಜನವಸತಿ ಪ್ರದೇಶವಿದ್ದು, ವಡೋದರಾದ ರಸ್ತೆಗಳಲ್ಲಿ ಮೊಸಳೆಗಳ ಸಂಚಾರ ಹೆಚ್ಚಾಗಿದೆ. ಮೊಸಳೆಗಳನ್ನು ರಕ್ಷಿಸುವ ಕಾರ್ಯ ವರ್ಷವಿಡೀ ಮುಂದುವರೆದಿದೆ. ಜೂನ್‌ನಲ್ಲಿ ನಾಲ್ಕು ಮೊಸಳೆಗಳನ್ನು ರಕ್ಷಿಸಿ ನದಿಗೆ ಬಿಡಲಾಗಿತ್ತು. ಆದರೆ, ಜುಲೈನಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಕರಣ್ ಸಿಂಗ್ ರಜಪೂತ್ ತಿಳಿಸಿದರು.