ನೀಟ್ ಸಿಬಿಎಸ್‌ಇ ಎಸ್‌ಎಸ್‌ಸಿ ಮತ್ತು ಇವತ್ತು ಸಿಯುಇಟಿ. ನಾಲ್ಕು ಪರೀಕ್ಷೆಗಳು– ಒಂದು ಕೋಟಿ ವಿದ್ಯಾರ್ಥಿಗಳು. ಒಂದೂ ಪರೀಕ್ಷೆಯನ್ನೂ ಪ್ರಮಾಣಿಕವಾಗಿ ನಡೆಸಿಲ್ಲ. ತಮ್ಮನ್ನು ತಾವು ವಿಶ್ವಗುರು ಎಂದು ಕರೆಸಿಕೊಳ್ಳುತ್ತಾರೆ. ಆದರೆ ಒಂದೇ ಒಂದು ಪರೀಕ್ಷೆಯನ್ನೂ ಸರಿಯಾಗಿ ನಡೆಸುತ್ತಿಲ್ಲ. ಮೋದಿ ಅವರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಯಾವ ಪೀಳಿಗೆಯವರ ಭವಿಷ್ಯವನ್ನು ನಾಶ ಪಡಿಸುತ್ತಿದ್ದೀರೊ ಅದೇ ಪೀಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತದೆ.
-ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಬೆಳಿಗ್ಗೆ ನಡೆಯಬೇಕಿದ್ದ ಪರೀಕ್ಷೆಗಳು ಒಂದು ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಎರಡು ತಾಸು ತಡವಾಗಿ ಆರಂಭವಾಯಿತು. ಅನನುಕೂಲಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ.
-ಕೆ. ಕೃತಿವಾಸನ್, ಸಿಇಒ ಟಿಸಿಎಸ್ ಕಂಪನಿ
ದೇಶಕ್ಕೆ ಒಬ್ಬ ಶಿಕ್ಷಿತ ಪ್ರಧಾನಿ ಬೇಕು.
-ಅರವಿಂದ ಕೇಜ್ರಿವಾಲ್, ಎಎಪಿ ಮುಖ್ಯಸ್ಥ
ದೆಹಲಿ ನೊಯಿಡಾ ಅಂಬಾಲಾ ವಾರಣಸಿ ಬೆಂಗಳೂರು ಕಾನ್ಪುರ ಮತ್ತು ಇತರೆ ಕೆಲವು ನಗರಗಳಲ್ಲಿ ಸಿಯುಇಟಿ–ಯುಜಿ ಪರೀಕ್ಷೆಗಳು ತಡವಾಗಿ ಆರಂಭವಾದ ಬಗ್ಗೆ ವರದಿಗಳಾಗುತ್ತಿವೆ. ಕೆಲವು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9.30ಕ್ಕೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕರೆ ಕೆಲವರಿಗೆ 11.30ಕ್ಕೆ ಸಿಕ್ಕಿದೆ.