ಚೆನ್ನೈ: ನಗರದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಫ್ಲೈಒವರ್ಗಳ ಮೇಲೆ ನೂರಾರು ಕಾರುಗಳ ನಿಲುಗಡೆ, ಮೊಣಕಾಲು ವರೆಗೆ ನಿಂತಿದ್ದ ನೀರಿನಲ್ಲಿ ಸಾಗಿ ಸುರಕ್ಷಿತ ತಾಣ ಅರಸುತ್ತಿದ್ದ ಜನರು, ಆಸ್ಪತ್ರೆಗಳಿಗೂ ನೀರು ನುಗ್ಗಿ ಪರದಾಡಿದ ವೈದ್ಯರು ಹಾಗೂ ರೋಗಿಗಳು....

ತಮಿಳುನಾಡು ಕರಾವಳಿಗೆ ಫೆಂಗಲ್ ಚಂಡಮಾರುತ ಶನಿವಾರ ಅಪ್ಪಳಿಸಿದ್ದರಿಂದ ನಗರವೂ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದರಿಂದ ಕಂಡುಬಂದ ದೃಶ್ಯಗಳಿವು

ನಗರದ ಹಲವೆಡೆ ನೆಲಮಹಡಿಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನುಗ್ಗಿದ್ದರಿಂದ ಸಂತ್ರಸ್ತರಾದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಶುಕ್ರವಾರ ಸಂಜೆಯಿಂದಲೇ ಬೀಳಲು ಆರಂಭಿಸಿದ್ದ ಮಳೆ, ಶನಿವಾರ ಚಂಡಮಾರುತ ಅಪ್ಪಳಿಸಿದ ನಂತರ ಬಿರುಸು ಪಡೆಯಿತು.

ಜನವಸತಿ ಅಧಿಕವಿರುವ ಪ್ರದೇಶಗಳಾದ ಮಾಂಬಳಮ್, ಕೋಡಂಬಾಕಂ, ಮಾದಿಪಕ್ಕಂ, ಕೀಳಕಟ್ಟಳೈ, ಅಶೋಕನಗರ, ನುಂಗಂಬಾಕಂ, ಆಳ್ವಾರ್ಪೇಟ್, ಪೆರಂಬೂರು ಹಾಗೂ ಪುರಸಾಯಿವಲ್ಕಮ್ಗಳಲ್ಲಿ ರಸ್ತೆ, ಮನೆಗಳಲ್ಲಿ ನೀರು ನಿಂತು ಹೆಚ್ಚು ತೊಂದರೆಯಾಗಿದೆ. ಜನರು ಮನೆಯಿಂದ ಹೊರಬರಲಾರದೇ ಸಂಕಷ್ಟ ಎದುರಿಸಿದರು ಎಂದು ಮೂಲಗಳು ಹೇಳಿವೆ.

ಉತ್ತರ ಚೆನ್ನೈನ ವೇಲಾಚೆರಿ, ಪಳ್ಳಿಕರಣೈ, ಮೇದವಕ್ಕಂ ಹಾಗೂ ಮಿಂಟ್ ಜಂಕ್ಷನ್ನ ಫ್ಲೈಒವರ್ಗಳನ್ನು ಜನರು, ಕಾರು ಪಾರ್ಕಿಂಗ್ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ. ನಗರದ ಹೊರವಲಯದ ಅನೇಕ ಪ್ರದೇಶಗಳಲ್ಲಿಯೂ ಮಳೆಯಿಂದ ಅನಾಹುತಗಳು ಸಂಭವಿಸಿವೆ.

‘ಭಾರಿ ಮಳೆಯಿಂದಾಗಿ ಹಾನಿಯಾಗುವುದನ್ನು ತಪ್ಪಿಸಲು ಕಾರುಗಳನ್ನು ಫ್ಳೈಒವರ್ಗಳಲ್ಲಿ ನಿಲುಗಡೆ ಮಾಡಲಾಗಿದೆ’ ಎಂದು ಹೇಳುವ ಜನರು, ‘ಚಂಡಮಾರುತ ಪರಿಣಾಮ ಎದುರಿಸಲು ಸರ್ಕಾರ ಯಾಕೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಪ್ರಶ್ನಿಸುತ್ತಿದ್ದಾರೆ.

‘ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಗುಂಡಿಗಳು ಕಾಣುತ್ತಿಲ್ಲ. ಗುಂಡಿಗಳಿಂದಾಗಿ ಸಮಸ್ಯೆಯಾಗಬಹುದು ಎಂಬ ಆತಂಕ ಜನರಲ್ಲಿದೆ. ಹಲವು ವರ್ಷಗಳಿಂದ ಇಲ್ಲಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯೇ ಆಗಿಲ್ಲ’ ಎಂದು ಮಾದಿಪಕ್ಕಂ ನಿವಾಸಿ ಲಕ್ಷ್ಮಿ ಎಂಬುವವರು ಹೇಳಿದ್ಧಾರೆ.

ಪ್ರಮುಖ ಅಂಶಗಳು

* ಗಂಟೆಗೆ 70–100 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಅಣ್ಣಾಸಾಲೈ ಸೇರಿದಂತೆ ಹಲವು ರಸ್ತೆಗಳಲ್ಲಿನ ಬ್ಯಾರಿಕೇಡ್ಗಳು ಹಾರಿಹೋಗಿದ್ದವು. ಶ್ರೀಪೆರಂಬದೂರಿನಲ್ಲಿ ಟ್ರಾಫಿಕ್ ಸಿಗ್ನಲ್ ದೀಪ ಬಿದ್ದಿತ್ತು

* ಸರ್ಕಾರದ ಎಚ್ಚರಿಕೆ ಹೊರತಾಗಿಯೂ ಸಮುದ್ರ ತೀರ ಮಾಮಲ್ಲಪುರಂನ ವಿಶ್ವ ಪಾರಂಪರಿತ ತಾಣಕ್ಕೆ ಜನರ ಭೇಟಿ

* ಚೆನ್ನೈನ ಕ್ರೋಮ್ಪೇಟೆಯಲ್ಲಿರುವ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ನೀರು ನಿಂತು ಸಮಸ್ಯೆ. ಮೊಣಕಾಲು ವರೆಗೆ ನೀರು ನಿಂತಿದ್ದರಿಂದ ವೈದ್ಯರು ಹಾಗೂ ರೋಗಿಗಳು ಪರದಾಡಿದರು

* ಮೆಟ್ರೊ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನೀರು ನಿಂತು ತೊಂದರೆಯಾಗಿದೆ. ಪಂಪ್ಸೆಟ್ ಬಳಸಿ ನೀರು ಹೊರಹಾಕಲಾಗುತ್ತಿದೆ

ಆಂಧ್ರ: ಕರಾವಳಿ ರಾಯಲಸೀಮಾದಲ್ಲಿ ಮಳೆ

ಹೈದರಾಬಾದ್: ‘ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ದಕ್ಷಿಣ ಕರಾವಳಿ ಹಾಗೂ ರಾಯಲಸೀಮಾ ಪ್ರದೇಶದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ’ ಎಂದು ಆಂಧ್ರಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರೋಣಂಕಿ ಕೂರ್ಮನಾಥ ಹೇಳಿದ್ದಾರೆ.

‘ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಗಳು ಸೇರಿದಂತೆ ಕರಾವಳಿಯಲ್ಲಿ ಗಂಟೆಗೆ 70–90 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದೂ ತಿಳಿಸಿದ್ಧಾರೆ.

ನೆಲ್ಲೂರಿನ ತಗ್ಗುಪ್ರದೇಶಗಳಲ್ಲಿ ನೀರು ನಿಂತು ಜನರು ಪರದಾಡಿದ್ದಾರೆ. ಆಂಧ್ರಪ್ರದೇಶದ ತಿರುಮಲದಲ್ಲಿ ದಟ್ಟ ಮಂಜು ಕವಿದಿದ್ದರಿಂದ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗಿತ್ತು. ವೆಂಕಟೇಶ್ವರ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ತೊಂದರೆ ಅನುಭವಿಸಿದರು.

ತಾವು ತಂಗಬೇಕಿದ್ದ ಸ್ಥಳಗಳನ್ನು ತಲುಪಲು ದರ್ಶನ ನಂತರ ಲಡ್ಡು ಪ್ರಸಾದ ಪಡೆಯಲು ಭಕ್ತರಿಗೆ ಕಷ್ಟವಾಯಿತು. ವಿಪತ್ತು ನಿರ್ವಹಣಾ ಇಲಾಖೆ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಭೆ ನಡೆಸಿ ಚಂಡಮಾರುತದಿಂದ ಉದ್ಭವಿಸಿದ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

‘ಜಲಕಾಯಗಳ ಸಂಖ್ಯೆ ಕುಸಿತದಿಂದ ಸಮಸ್ಯೆ’

‘ಚೆನ್ನೈನಲ್ಲಿ ಜಲಕಾಯಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಪ್ರವಾಹ ಸ್ಥಿತಿ ಉಂಟಾಗಲು ಪ್ರಮುಖ ಕಾರಣ’ ಎಂದು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ‘ಪೂವುಳಗಿನ್ ನನ್ಬರ್ಗಲ್’ ನ ಜಿ.ಸುಂದರರಾಜನ್ ಹೇಳುತ್ತಾರೆ.

‘2015ರಲ್ಲಿ 119 ಜಲಕಾಯಗಳಿದ್ದವು. 2020ರ ವೇಳೆಗೆ ಇವುಗಳ ಸಂಖ್ಯೆ 64ಕ್ಕೆ ಕುಸಿಯಿತು. ಈ ವರ್ಷ ಇವುಗಳ ಸಂಖ್ಯೆ 62 ಇದ್ದಿರಬಹುದು’ ಎಂದು ಹೇಳುತ್ತಾರೆ. ‘ಈ ಮೊದಲು ಈ ಜಲಕಾಯಗಳ ವಿಸ್ತೀರ್ಣ 101 ಚದರ ಕಿ.ಮೀ.ನಷ್ಟು ಇತ್ತು. ಈಗ 64 ಚದರ ಕಿ.ಮೀ.ಗೆ ಕುಸಿದಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.