ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ, ಕುಖ್ಯಾತ ಮಾದಕವಸ್ತು ಕಳ್ಳ ಸಾಗಣೆದಾರ ಮೊಹಮ್ಮದ್ ಸಲೀಂ ಡೋಲಾನನ್ನು (59) ಮೇ 8ರವರೆಗೆ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಕಸ್ಟಡಿಗೆ ನೀಡಿ ಇಲ್ಲಿನ ನ್ಯಾಯಾಲಯ ಗುರುವಾರ ಆದೇಶಿಸಿದೆ.

2024ರ ಮಾರ್ಚ್ ವೇಳೆ ಭಾರತದ ಕೋರಿಕೆಯ ಮೇರೆಗೆ ಹೊರಡಿಸಲಾದ ಇಂಟರ್ಪೋಲ್ ರೆಡ್ ನೋಟಿಸ್ ಆಧಾರದಲ್ಲಿ ಡೋಲಾನನ್ನು ಟರ್ಕಿಯಲ್ಲಿ ಬಂಧಿಸಲಾಗಿತ್ತು. ಈತ ಭಾರತದಲ್ಲಿನ ಹಲವಾರು ಮಾದಕವಸ್ತು ಸಾಗಣೆ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಈತನನ್ನು ದೆಹಲಿಗೆ ಮಂಗಳವಾರ ಕರೆತರಲಾಗಿತ್ತು.

ಡೋಲಾನನ್ನು ಮುಂಬೈಗೆ ಕರೆದೊಯ್ಯಲು ಎನ್ಸಿಬಿಗೆ ದೆಹಲಿ ನ್ಯಾಯಾಲಯವು ಎರಡು ದಿನಗಳ ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಿದೆ.

ಅಧಿಕಾರಿಗಳ ತಂಡವು ಡೋಲಾನನ್ನು ಮುಂಬೈಗೆ ಬುಧವಾರ ಕರೆತಂದಿದ್ದು, ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ.ಎಸ್.ಜನ್ವರ್ ಅವರ ಎದುರು ಗುರುವಾರ ಹಾಜರುಪಡಿಸಿತು.

ಪ್ರಕರಣದ ಸಮಗ್ರ ತನಿಖೆಗಾಗಿ ಆತನನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ಎನ್ಸಿಬಿ ಮನವಿ ಮಾಡಿತ್ತು. ನ್ಯಾಯಾಲಯವು ಮೇ 8ರವರೆಗೆ ವಶಕ್ಕೆ ನೀಡಿದೆ.

2023ರಲ್ಲಿ ದಕ್ಷಿಣ ಮುಂಬೈನಲ್ಲಿ 20 ಕಿಲೋಗ್ರಾಂ ಮೆಫೆಡ್ರೋನ್ ಮಾದಕ ವಸ್ತುವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

‘ಡೋಲಾ ಮುಂಬೈನ ಡೋಂಗ್ರಿ ಪ್ರದೇಶದವನಾಗಿದ್ದು, ಮಾದಕ ವಸ್ತುಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದ. ಈತ ವಿದೇಶದಲ್ಲಿ ಇದ್ದುಕೊಂಡೇ ದೇಶದ ವಿವಿಧ ಭಾಗಗಳಲ್ಲಿ ಮೆಫೆಡ್ರೋನ್ ವಿತರಣಾ ಜಾಲವನ್ನು ನಿರ್ವಹಿಸುತ್ತಿದ್ದ ಹಾಗೂ ಅದನ್ನು ವಿಸ್ತರಿಸಿದ್ದ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.