ನವದೆಹಲಿ: ಮುಸುಕುಧಾರಿ ವ್ಯಕ್ತಿಯೊಬ್ಬ ತನ್ನ ಎಸ್ಯುವಿ ಕಾರಿನಲ್ಲಿ ದೆಹಲಿ ವಿಧಾನಸಭೆಯ ಗೇಟು ಮುರಿದು ಒಳನುಗ್ಗಿ ಸ್ಪೀಕರ್ ಕಚೇರಿಯ ಹೊರಭಾಗದಲ್ಲಿ ಹೂಗುಚ್ಛ ಇಟ್ಟು, ನಂತರ ಬಂದ ಮಾರ್ಗದಲ್ಲಿಯೇ ಪರಾರಿಯಾಗಿದ್ದಾನೆ. ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲಿಯೇ ಮಧ್ಯಾಹ್ನ ಘಟನೆ ನಡೆದಿದ್ದು, ಭಾರಿ ಭದ್ರತಾ ವೈಫಲ್ಯದ ಪ್ರಶ್ನೆ ಎದುರಾಗಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡಗಳು, ಬಾಂಬ್ ನಿಷ್ಕ್ರಿಯ ತಂಡ ಹೂಗುಚ್ಛ ಇಟ್ಟ ಪ್ರದೇಶ ಸೇರಿದಂತೆ ಹಲವೆಡೆ ಪರಿಶೀಲನೆ ನಡೆಸಿದವು. ಇಡೀ ನಗರದಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು.

‘ಉತ್ತರ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಮಧ್ಯಾಹ್ನ 2 ಗಂಟೆ ವೇಳೆಗೆ ಗೇಟ್ ನಂ.2ರಿಂದ ಒಳಪ್ರವೇಶಿಸಿದ್ದ. ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿ ಮುಂದೆ ಹೂಗುಚ್ಛ ಇಟ್ಟು ಅಲ್ಲಿಂದ ಪರಾರಿಯಾದ’ ಎಂದು ದೆಹಲಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ವಿಶೇಷ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ರವೀಂದ್ರ ಯಾದವ್ ಅವರು ಸ್ಥಳಕ್ಕೆ ಧಾವಿಸಿ, ಘಟನೆಯ ಕುರಿತಂತೆ ಮಾಹಿತಿ ಕಲೆಹಾಕಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಉತ್ತರ ದೆಹಲಿಯಲ್ಲಿ ಬಂಧಿಸಲಾಗಿದೆ. ಕಾರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಪಿಎನ್ಜಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ಉದ್ಯಮಗಳಿಗೆ LPG ಪೂರೈಕೆ: ದೆಹಲಿ ಸರ್ಕಾರ.ಮಿಲಿಟರಿ ಸಾಮರ್ಥ್ಯವನ್ನೇ ಬದಲಿಸಬಲ್ಲ ಭಾರತದ 1,000-ಕಿಲೋ ಬಾಂಬ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.