ನವದೆಹಲಿ: ಮಾದಕವಸ್ತು ನಿಗ್ರಹ ದಳದ (ಎನ್ಸಿಬಿ) ಅಧಿಕಾರಿಗಳು ದೇಶದಲ್ಲಿ ಮೊದಲ ಬಾರಿಗೆ ‘ಜಿಹಾದಿ ಡ್ರಗ್ಸ್’ ಎಂದು ಕರೆಯಲಾಗುವ ₹182 ಕೋಟಿ ಮೊತ್ತದ 227.7 ಕೆ.ಜಿಯಷ್ಟು ‘ಕ್ಯಾಪ್ಟಗಾನ್’ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

‘ಆಪರೇಷನ್ ರೇಜ್ಪಿಲ್’ ಕಾರ್ಯಾಚರಣೆ ಮೂಲಕ ‘ಎನ್ಸಿಬಿ’ ದೇಶದಲ್ಲಿ ಮೊದಲ ಬಾರಿಗೆ ಬೃಹತ್ ಕಾರ್ಯಾಚರಣೆ ನಡೆಸಿದೆ. ‘ಮೋದಿ ಸರ್ಕಾರವು ‘ಮಾದಕ ವಸ್ತು ಮುಕ್ತ ಭಾರತ’ ಮಾಡಲು ಸಂಕಲ್ಪ ಮಾಡಿದೆ. ಎನ್ಸಿಬಿ ಅಧಿಕಾರಿಗಳಿಗೆ ಅಭಿನಂದನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ನವದೆಹಲಿಯ ನೆಬ್ ಸೆರೈನಲ್ಲಿರುವ ಮನೆಯೊಂದರ ಮೇಲೆ ಮೇ 11ರಂದು ಎನ್ಸಿಬಿ ನಡೆಸಿದ ದಾಳಿಯಲ್ಲಿ 31.5 ಕೆಜಿಯಷ್ಟು ಕ್ಯಾಪ್ಟಗಾನ್ ಮಾತ್ರೆಗಳನ್ನು ವಶಕ್ಕೆ ಪಡೆಯಲಾಯಿತು. ಈ ಮಾತ್ರೆಗಳನ್ನು ಚಪಾತಿ ತಯಾರಿಸುವ ಯಂತ್ರದಲ್ಲಿ ಬಚ್ಚಿಟ್ಟು, ಸೌದಿ ಅರೇಬಿಯಾಕ್ಕೆ ರಫ್ತು ಮಾಡುವ ಯೋಜನೆ ರೂಪಿಸಲಾಗಿತ್ತು. ಈ ಮನೆಯಲ್ಲಿ ಬಾಡಿಗೆಗೆ ಇದ್ದ ಆರೋಪಿ, ಸಿರಿಯಾ ದೇಶದ ಪ್ರಜೆಯನ್ನು ವಿಚಾರಣೆಗೆ ಒಳಪಡಿಸಿದಾಗ ಕ್ಯಾಪ್ಟಗಾನ್ ಅಕ್ರಮ ಆಮದು–ರಫ್ತು ವಹಿವಾಟು ಜಾಲ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.