ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಿಸಿಲಿನ ಝಳದಿಂದ ಪಾರಾಗಲು ಬಸ್ಗಳಲ್ಲೂ ಪ್ರಯಾಣಿಕರಿಗೆ ಅಲ್ಲಿನ ಸರ್ಕಾರ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.

3,000 ಬಸ್ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಪಂಕಜ್ ಸಿಂಗ್ ಹೇಳಿದ್ದಾರೆ.

‘ದೆಹಲಿಯ ಬಿಸಿಗಾಳಿ ಕ್ರಿಯಾ ಯೋಜನೆ’ಯಡಿಯಲ್ಲಿ ದೆಹಲಿ ಸಾರಿಗೆ ನಿಗಮದಲ್ಲಿ(ಡಿಟಿಸಿ) ಕುಡಿಯುವ ನೀರು ಪೂರೈಸುವ ‘ಜಲದೂತ್’ ಉಪಕ್ರಮಕ್ಕೆ ಅವರು ಚಾಲನೆ ನೀಡಿದರು.

'ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರು ಒದಗಿಸಲು ಡಿಟಿಸಿ, ದೆಹಲಿಯಾದ್ಯಂತ 23 ಪ್ರಮುಖ ಬಸ್ ಟರ್ಮಿನಲ್ಗಳಲ್ಲಿ 'ಜಲದೂತ್'ಗಳನ್ನು ಅಳವಡಿಸಿದೆ’ಎಂದು ಸಿಂಗ್ ಹೇಳಿದ್ದಾರೆ.

ಈ ಉಪಕ್ರಮವನ್ನು ಮತ್ತಷ್ಟು ಬಲಪಡಿಸುತ್ತಾ, ನಗರದಾದ್ಯಂತ ಸಂಚರಿಸುವ ಸುಮಾರು 3,000 ಡಿಟಿಸಿ ಬಸ್ಗಳಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಜನಸಾಮಾನ್ಯರಿಗೆ, ಅದರಲ್ಲೂ ತೀವ್ರ ಶಾಖದ ಪರಿಸ್ಥಿತಿಗಳಲ್ಲಿ ಬಳಲುವ ಪ್ರಯಾಣಿಕರಿಗೆ ತಕ್ಷಣದ ಪರಿಹಾರವನ್ನು ನೀಡುವ ಗುರಿಯನ್ನು ಈ ಉಪಕ್ರಮ ಹೊಂದಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.