ನವದೆಹಲಿ (ಪಿಟಿಐ): ದಕ್ಷಿಣ ದೆಹಲಿಯ ಮಾಳವೀಯ ನಗರದ ಐದು ಅಂತಸ್ತಿನ ಹೋಟೆಲ್ನಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭಾರಿ ಪ್ರಮಾಣದ ಅಗ್ನಿ ದುರಂತದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಬೆಂಕಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ಮಗುವಿನೊಂದಿಗೆ ಮೂರನೇ ಮಹಡಿಯಿಂದ ಜಿಗಿದಿರುವ ಘಟನೆಯೂ ಈ ವೇಳೆ ನಡೆದಿದೆ. ಕಟ್ಟಡದೊಳಗೆ ಸಿಲುಕಿದ್ದವರನ್ನು ರಕ್ಷಿಸಲು ಸ್ಥಳೀಯರು ನಾನಾ ರೀತಿಯಲ್ಲಿ ನೆರವಾಗಿ, ಹಲವರ ಪ್ರಾಣ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಮೃತಪಟ್ಟವರಲ್ಲಿ ಆರು ಜನರು ವಿದೇಶಿಯರಾಗಿದ್ದು, ಮುಖ್ಯವಾಗಿ ಮಧ್ಯ ಏಷ್ಯಾ ಮತ್ತು ಆಫ್ರಿಕದ ದೇಶಗಳಿಗೆ ಸೇರಿದವರಾಗಿದ್ದಾರೆ. ಗಾಯಗೊಂಡವರ ಪೈಕಿ ಒಂಬತ್ತು ಜನರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

‘ಬೆಂಕಿ ಅವಘಡದಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ 21 ಜನರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಕಿ ಅವಘಡ ಸಂಭವಿಸಿದ ಹೋಟೆಲ್ನ ಹೆಸರು ‘ಫ್ಲೋರಿಷ್ ಸ್ಟೇ ಬಿ ಆ್ಯಂಡ್ ಬಿ’ ಆಗಿದ್ದು, ಅದು ಇಲ್ಲಿನ ಜನದಟ್ಟಣೆ ಪ್ರದೇಶವಾದ ‘ಹೌಜ್ ರಾಣಿ’ಯಲ್ಲಿದೆ.

ಅಗ್ನಿಶಾಮಕ ದಳದ ಅಧಿಕಾರಿ ಎ.ಕೆ.ಮಲಿಕ್ ಪ್ರಕಾರ, ಕಟ್ಟಡವು ತಳಮಹಡಿ, ನೆಲಮಹಡಿ ಮತ್ತು ಐದು ಅಂತಸ್ತುಗಳನ್ನು ಒಳಗೊಂಡಿದೆ.

ಕಟ್ಟಡದ ನೆಲಮಹಡಿಯಲ್ಲಿ ರೆಸ್ಟೋರೆಂಟ್, ಉಳಿದ ಭಾಗದಲ್ಲಿ ಹೋಟೆಲ್ ಇತ್ತು. ಆದರೆ ಹೋಟೆಲ್ ಕೇವಲ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಹೊಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಗಾಜು ಒಡೆದು ಕೆಳಗೆ ಹಾರಿದರು..

‘ಬೆಳಿಗ್ಗೆ 9.30ರ ಸುಮಾರಿಗೆ ಕಟ್ಟಡದಿಂದ ಬೆಂಕಿ ಮತ್ತು ಹೊಗೆ ಬರುತ್ತಿದ್ದುದನ್ನು ಗಮನಿಸಿದೆ. ನಾಲ್ಕರಿಂದ ಆರು ಮಂದಿ ಗಾಜು ಒಡೆದು, ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದರು. ಅದರಲ್ಲಿ ಒಬ್ಬರ ಕಾಲು ಮುರಿದಂತೆ ಕಾಣುತ್ತದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಜನರು ಕಟ್ಟಡದಿಂದ ಹಾರುವುದನ್ನು ಗಮನಿಸಿದ ಹಾಸಿಗೆ ಮಾರಾಟಗಾರರೊಬ್ಬರು ಕೂಡಲೇ ನೆಲದ ಮೇಲೆ ಹಾಸಿಗೆಗಳನ್ನು ಹರಡಿದರು. ಸ್ಥಳೀಯ ನಿವಾಸಿಗಳೂ ಹಾಸಿಗೆಗಳನ್ನು ತಂದು ಹಾಸಿದರು. ಅಲ್ಲಿದ್ದ ಇತರ ಸ್ಥಳೀಯರು ಗಾಯಗೊಂಡವರಿಗೆ ಸಿಪಿಆರ್ ನೀಡಿದರು. ತುರ್ತು ರಕ್ಷಣೆ ಸೇವಾ ಪಡೆಗಳು ಬರುವುದಕ್ಕೂ ಮೊದಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡಿದ್ದರು’ ಎಂದು ಅವರು ವಿವರಿಸಿದರು.

ವಿಷಯ ತಿಳಿದ ಬಳಿಕ ಅಗ್ನಿಶಾಮಕ ದಳದವರು, ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ಕೈಗೊಂಡರು. ಗಾಯಗೊಂಡವರನ್ನು ಕಟ್ಟಡದಿಂದ ಹೊರತಂದು ಆಂಬುಲೆನ್ಸ್ಗಳ ಮೂಲಕ ಆಸ್ಪತ್ರೆಗಳಿಗೆ ಸಾಗಿಸಿದರು. ಅಲ್ಲದೆ ಹೊಗೆ ಆವರಿಸಿದ್ದ ಕಟ್ಟಡದಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಸಿದರು.

ಈ ಕಟ್ಟಡ ಹೋಟೆಲ್ ಆಗಿ ಪರಿವರ್ತನೆ ಆಗುವುದಕ್ಕೂ ಮುನ್ನ ಇಲ್ಲಿ, ಖಾದಿ ಭಂಡಾರ ಮಳಿಗೆಯಿತ್ತು ಎಂದು ಸ್ಥಳೀಯೊಬ್ಬರು ತಿಳಿಸಿದರು. ಸಮೀಪದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರು ವಸತಿಗಾಗಿ ಈ ಹೋಟೆಲ್ ಅನ್ನು ಬಳಸುತ್ತಿದ್ದರು ಎಂದೂ ಅವರು ಹೇಳಿದರು.

ಮಾಲೀಕರ ವಿರುದ್ಧ ಎಫ್ಐಆರ್ ದಾಖಲು...

ದುರಂತ ಸಂಬಂಧ ದೆಹಲಿ ಪೊಲೀಸರು ಹೋಟೆಲ್ ಮಾಲೀಕರ ವಿರುದ್ಧ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ತಪ್ಪಿಸಿಕೊಂಡಿರುವ ಮಾಲೀಕರ ಬಂಧನಕ್ಕೆ ಕೆಲ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅದಿಕಾರಿಯೊಬ್ಬರು ತಿಳಿಸಿದರು.

ವಿದೇಶಿಗರ ಕುಟುಂಬದವರಿಗೆ ನೆರವು...

ಅಗ್ನಿ ದುರಂತದಲ್ಲಿ ಕೆಲ ವಿದೇಶಿಯರು ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ. ಬದುಕುಳಿದಿರುವ ವಿದೇಶಿಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಗತ್ಯ ನೆರವು ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಈ ಸಂಬಂಧ ಕೆಲ ರಾಯಭಾರ ಕಚೇರಿಗಳ ಜತೆ ಇಲಾಖೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ಸಹಾಯ ನೀಡಲಿದೆ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಬಾಂಗ್ಲಾದೇಶದ ಐವರು ಪ್ರಜೆಗಳು ಈ ದುರಂತದಲ್ಲಿ ಗಾಯಗೊಂಡಿದ್ದಾರೆ ಎಂದು ಬಾಂಗ್ಲಾದೇಶ ಹೈ ಕಮಿಷನ್ ತಿಳಿಸಿದೆ.

ಮಗುವಿನೊಂದಿಗೆ ಜಿಗಿದ ಮಹಿಳೆ

ಮೂರನೇ ಮಹಡಿಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬರು ತನ್ನ ಮಗುವನ್ನು ತೋಳುಗಳಲ್ಲಿ ಗಟ್ಟಿಯಾಗಿ ಹಿಡಿದು ಕೆಳಕ್ಕೆ ಜಿಗಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಒಳಗೆ ಸಿಲುಕಿರುವವರನ್ನು ರಕ್ಷಿಸಲು ಸ್ಥಳೀಯ ನಿವಾಸಿಗಳು ಹಾಸಿಗೆಗಳನ್ನು ಹರಡಿದ ಬಳಿಕ, ಆ ಮಹಿಳೆ ಮಗುವನ್ನು ಹಿಡಿದು ಹಾರಿದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆಗೆ ಕೆಲ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅವರು ವಿವರಿಸಿದರು.

ಸಿಲುಕಿದ್ದವರ ಕಿರುಚಾಟ

‘ಕಟ್ಟಡದಿಂದ ಹಲವು ಬಾರಿ ಸ್ಫೋಟದಂತಹ ಶಬ್ದಗಳು ಕೇಳಿ ಬಂದಿತು. ಒಳಗಿನಿಂದ ಕಿರುಚಾಟ ಜೋರಾಗಿ ಬರುತ್ತಿತ್ತು. ಸಹಾಯಕ್ಕಾಗಿ ಕೂಗುತ್ತಿದ್ದರು. ಕೆಲವರು ಕಿಟಕಿಗಳಿಂದ ಹಾರಿದರು. ಅವರ ರಕ್ಷಣೆಗಾಗಿ ಕಟ್ಟಡದ ಕಡೆಗೆಧಾವಿಸಿದರು’ ಎಂದು ಸ್ಥಳೀಯ ನಿವಾಸಿ ಅನಿತಾ ಚೌಧರಿ ಪ್ರತಿಕ್ರಿಯಿಸಿದರು.

ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ

ಅಗ್ನಿ ದುರಂತದಲ್ಲಿ ಮೃತಪಟ್ಟವರಿಗೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50,000 ಪರಿಹಾರ ಘೋಷಿಸಿದ್ದಾರೆ.

ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ಅವರು, ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖರ್ಗೆ ಆಗ್ರಹ: ‘ಬೆಂಕಿ ಅವಘಡದಿಂದ ತೀವ್ರ ದುಃಖಿತನಾಗಿದ್ದೇನೆ’ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ದೆಹಲಿಯ ಅಧಿಕಾರಿಗಳು ಸಂತ್ರಸ್ತರಿಗೆ ತ್ವರಿತವಾಗಿ ವೈದ್ಯಕೀಯ ಆರೈಕೆ ಸೇರಿದಂತೆ ಎಲ್ಲ ಪರಿಹಾರಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಬಂಧಿಕರ ಆಕ್ರಂದನ

ಅಗ್ನಿ ದುರಂತದಲ್ಲಿ ಮೃತಪಟ್ಟವರ ಮತ್ತು ಗಾಯಗೊಂಡವರ ಮಾಹಿತಿ ಪಡೆಯಲು ಇಲ್ಲಿನ ಸಾಕೇತ್ ಮ್ಯಾಕ್ಸ್ ಆಸ್ಪತ್ರೆ ಬಳಿ ಜನ ಪರದಾಡುತ್ತಿದ್ದರು.

ಆಸ್ಪತ್ರೆ ಬಳಿ ಸೇರಿದ್ದ ದುಃಖಿತ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಯಸ್ಥರು ಆತಂಕಗೊಂಡಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಅವರು ಕಣ್ಣೀರು ಹಾಕುತ್ತಾ ತಮ್ಮ ಪ್ರೀತಿಪಾತ್ರರ ಹುಡುಕಾಟದಲ್ಲಿ ತೊಡಗಿದ್ದರು. ಫೋಟೊಗಳನ್ನು ಹಿಡಿದು ಅಧಿಕಾರಿಗಳಿಂದ ಮಾಹಿತಿ ಕೇಳುತ್ತಿದ್ದರು.

‘ಸುಟ್ಟು ಕರಕಲಾಗಿರುವ ಶವಗಳನ್ನು ನೋಡಿ, ಎಲ್ಲರೂ ಸುಟ್ಟುಹೋಗಿದ್ದಾರೆ. ಇವರಲ್ಲಿ ನಮ್ಮ ಸಂಬಂಧಿಕರನ್ನು ಹೇಗೆ ಗುರುತಿಸುವುದು, ಗೊತ್ತೇ ಆಗುತ್ತಿಲ್ಲ, ನೆರವಾಗಿ’ ಎಂದು ಅಂಗಲಾಚುತ್ತಿದ್ದರು.

‘ಬೆಂಕಿ ದುರಂತದಲ್ಲಿ ಸಿಲುಕಿದವರಲ್ಲಿ ನನ್ನ ಆರು ಸಂಬಂಧಿಕರು ಸೇರಿದ್ದಾರೆ. ಇವರಲ್ಲಿ ನಾಲ್ವರ ಶವಗಳನ್ನು ಗುರುತಿಸಲಾಗಿದೆ. ಇಬ್ಬರನ್ನು ಗುರುತಿಸಲಾಗಿಲ್ಲ. ಕೆಲ ಶವಗಳು ಮತ್ತೊಂದು ಆಸ್ಪತ್ರೆಯಲ್ಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲೂ ಹೋಗಿ ನೋಡುತ್ತೇವೆ’ ಎಂದು ನಮಿತ್ ಗೋಯಲ್ ಎಂಬವರು ದುಃಖಿಸುತ್ತಾ ಹೇಳಿದರು.

‘ವೈದ್ಯಕೀಯ ಚಿಕಿತ್ಸೆಗಾಗಿ ಗುರುಗ್ರಾಮದಿಂದ ಈ ಆರು ಸದಸ್ಯರು ಬಂದು, ಈ ಹೋಟೆಲ್ನಲ್ಲಿ ತಂಗಿದ್ದರು’ ಎಂದು ಅವರು ತಿಳಿಸಿದರು.

ಆಸ್ಪತ್ರೆಯ ಇನ್ನೊಂದೆಡೆ ವಿವೇಕ್ ಎಂಬವರು ತಮ್ಮ 25 ವರ್ಷದ ಗೆಳತಿ ಸುಜಿತಾಳನ್ನು ಹುಡುಕುತ್ತಿದ್ದರು. ಬೆಂಕಿ ಅವಘಡದಲ್ಲಿ ಸಿಲುಕಿದವರಲ್ಲಿ ಅವರೂ ಇದ್ದಾರೆ ಎಂದು ನಂಬಲಾಗಿದೆ. ಆದರೆ ಇಲ್ಲಿಯವರೆಗೆ ಗುರುತಿಸಲು ಆಗಿಲ್ಲ. ಗೆಳತಿಯ ಮೊಬೈಲ್ ಕೂಡ ಪತ್ತೆಯಾಗಿಲ್ಲ ಎಂದು ಅವರು ಕಣ್ಣೀರು ಹಾಕಿದರು.

ಸುರಕ್ಷತಾ ಮಾನದಂಡ ಉಲ್ಲಂಘನೆ

ಮುಚ್ಚಿದ ಗಾಜಿನ ಕಿಟಕಿಗಳು, ದುರಂತದ ಸಮಯದಲ್ಲಿ ಕಾರ್ಯನಿರ್ವಹಿಸದ
ಸೆನ್ಸರ್ ಚಾಲಿತ ಬಾಗಿಲುಗಳು, ಅಗ್ನಿ ಸುರಕ್ಷತಾ ಮಾನದಂಡಗಳ ಉಲ್ಲಂಘನೆ, ಅತಿಯಾದ ಕೊಠಡಿಗಳಿಂದಾಗಿದುರಂತದ ತೀವ್ರತೆ ಹೆಚ್ಚಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.