ನವದೆಹಲಿ: ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ 39ನೇ ಚಾತುರ್ಮಾಸ್ಯ ನವದೆಹಲಿಯ ಶಾಖಾ ಮಠದಲ್ಲಿ ನಡೆಯಲಿದೆ.

ಈ ನಿಮಿತ್ತ ಪೂರ್ವಭಾವಿ ಸಮಾಲೋಚನಾ ಸಭೆ ವಸಂತ್ ಕುಂಜ್ನಲ್ಲಿ ಶಾಖಾ ಮಠದಲ್ಲಿ ಗುರುವಾರ ಸಂಜೆ ನಡೆಯಿತು. ಹಿರಿಯ ವಕೀಲ ಅಲೋಕ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಛುಗ್ ಉಪಸ್ಥಿತರಿದ್ದು, ‘ವರ್ತಮಾನದಲ್ಲಿ ಕಾಣುತ್ತಿರುವ ಹಿಂದೂ ಪರ ಉತ್ಸಾಹಗಳಿಗೆ ಬಹಳ ದೊಡ್ಡ ವಿರೋಧಿ ಶಕ್ತಿಗಳ ಸವಾಲುಗಳೂ ಇವೆ. ಆದರೆ, ಅವೆಲ್ಲವನ್ನೂ ಹಿಮ್ಮೆಟ್ಟಿಸಿ ಈ ಉತ್ಸಾಹ ಕಾಯ್ದುಕೊಂಡು ಬಹಳಷ್ಟನ್ನು ಸಾಧಿಸಬೇಕಾಗಿದೆ. ಅದಕ್ಕಾಗಿ ಪೇಜಾವರ ಮಠದ ಶ್ರೀಗಳೂ ಸೇರಿದಂತೆ ದೇಶದ ಸಂತರ ಮಾರ್ಗದರ್ಶನ ಅತ್ಯಂತ ಅವಶ್ಯಕ’ ಎಂದರು.

ಚಾತುರ್ಮಾಸ್ಯದ ವಿವರಗಳನ್ನು ನವದೆಹಲಿ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ. ಶ್ರೀನಿವಾಸ ಆಚಾರ್ಯ ವರಖೇಡಿ ನೀಡಿದರು.

ಪೇಜಾವರ ಸ್ವಾಮೀಜಿ ಆಶೀರ್ವಚನ ನೀಡಿದರು. ಚಾತುರ್ಮಾಸ್ಯ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಅಲೋಕ್ ಕುಮಾರ್ ಅವರನ್ನು ನೇಮಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.