ನವದೆಹಲಿ: ಚರಂಡಿಯಲ್ಲಿ ಬಿಟ್ಟುಹೋಗಿದ್ದ ಒಂದೂವರೆ ತಿಂಗಳ ಹೆಣ್ಣುಮಗುವನ್ನು ದೆಹಲಿಯ ರೋಹಿಣಿಯಲ್ಲಿ ಪೊಲೀಸರು ರಕ್ಷಿಸಿದ್ದಾರೆ.

‘ಮಗುವಿನ ತಂದೆ ಸಜ್ಜನ್ ಕುಮಾರ್ (20) ಅವರಿಗೆ, ಹೆಣ್ಣುಮಗು ಇಷ್ಟ ಇರಲಿಲ್ಲ. ಹಾಗಾಗಿ, ಮಗುವನ್ನು ಚರಂಡಿಯಲ್ಲಿ ಬಿಟ್ಟುಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಜ್ಜನ್ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೇ 17ರಂದು ಮಗು ನಾಪತ್ತೆಯಾಗಿರುವ ಕುರಿತು ಬುದ್ಧ ವಿಹಾರ ಪೊಲೀಸ್ ಠಾಣೆಗೆ ಮಗುವಿನ ತಾಯಿ ದೂರು ನೀಡಿದ್ದು, ‘ಸಜ್ಜನ್ ಮಗುವನ್ನು ಮುಂಜಾನೆ ಹೊರಗೆ ಕರೆದುಕೊಂಡು ಹೋಗಿದ್ದರು. ಅವರಿಗೆ ಹೆಣ್ಣುಮಗುವಿನ ಜನನ ಇಷ್ಟವಿರಲಿಲ್ಲ’ ಎಂದು ಪೊಲೀಸರಿಗೆ ತಿಳಿಸಿದ್ದರು. ದೂರು ದಾಖಲಾದ ಮೂರು ಗಂಟೆಗಳಲ್ಲಿಯೇ ಮಗುವನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಜ್ಜನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ಅವರನ್ನು ವಿಚಾರಿಸಿದಾಗ ಮಗುವನ್ನು ರಿಠಾಲಾ ಬಳಿ ಚರಂಡಿಯಲ್ಲಿ ಬಿಟ್ಟು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ, ಚರಂಡಿಯ ಸುತ್ತಮುತ್ತ ತೀವ್ರ ಕಾರ್ಯಾಚರಣೆ ನಡೆಸಿ, ಮಗುವನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.