ನವದೆಹಲಿ: ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಇಂದು (ಶನಿವಾರ) ಮುಂಜಾನೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇಂಡಿಗೊ ವಿಮಾನಗಳ ಹಾರಾಟವನ್ನು ತಾತ್ಕಾಲಿಕ ವಾಗಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ 'ದೆಹಲಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್' ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
.ರಾಜಕೀಯ ತಜ್ಞ, ಲೇಖಕ ಪ್ರೊ.ಮುಜಾಫರ್ ಅಸ್ಸಾದಿ ನಿಧನ.ಧ್ವನಿವರ್ಧಕದಲ್ಲಿ ಮಾಹಿತಿ: ಅಂಗವಿಕಲರ ಒಳಗೊಳ್ಳುವಿಕೆಯತ್ತ ಮಹತ್ವದ ಹೆಜ್ಜೆ.
‘ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ ಕಡಿಮೆ ಇರುವುದರಿಂದ ವಿಮಾನಗಳ ಕಾರ್ಯಾಚರಣೆಗೆ ತೊಂದರೆಯಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ಪ್ರಯಾಣಿಕರು ಬದಲಾದ ವಿಮಾನಗಳ ಹಾರಾಟದ ಸಮಯವನ್ನು ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದೆ.

ದೆಹಲಿ ವಿಮಾನ ನಿಲ್ದಾಣದಿಂದ ಶುಕ್ರವಾರ ಮುಂಜಾನೆ ಹೊರಡಬೇಕಿದ್ದ 400ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿಯೂ ವಿಳಂಬ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಸಂದರ್ಶನ | ಒಪಿಎಸ್ ಮರು ಜಾರಿಗೆ ಹೋರಾಟ ತೀವ್ರ: ಸಿ.ಎಸ್. ಷಡಾಕ್ಷರಿ.ಸಂದರ್ಶನ | ಮಾರುಕಟ್ಟೆಯಲ್ಲೇ ಉತ್ತಮ ಬೆಲೆ ಬರುವಂತೆ ಮಾಡಬೇಕು: ಅಶೋಕ ದಳವಾಯಿ.ಧಾರವಾಡ | ಅಯ್ಯಪ್ಪಸ್ವಾಮಿ ಮೂರ್ತಿ ತೆರವುಗೊಳಿಸಿದರೆ ಪ್ರತಿಭಟನೆ: ಮುತಾಲಿಕ್.ಐಶ್ವರ್ಯ ಗೌಡ ಪ್ರಕರಣದಲ್ಲಿ ಅನಿತಾ, ನಿಖಿಲ್ ಹೆಸರು: ಎಚ್ಡಿಕೆ ಅಸಮಾಧಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.