ನವದೆಹಲಿ: ರಾಜ್ಯಸಭೆಯ ಸಭಾಪತಿ ಮತ್ತು ಉಪ ಸಭಾಪತಿ ಅವರ ಅನುಪಸ್ಥಿತಿಯಲ್ಲಿ ಕಲಾಪ ನಡೆಸುವ ಸದಸ್ಯರ ಸಮಿತಿಯನ್ನು ಸಭಾಪತಿ ಜಗದೀಪ್ ಧನಕರ್ ಅವರು ಗುರುವಾರ ಪುನರ್‌ರಚಿಸಿದರು. ಮಂಡಳಿಯಲ್ಲಿ ಶೇ 50 ಮಹಿಳಾ ಸದಸ್ಯರಿಗೆ ಅವಕಾಶ ನೀಡಿರುವುದು ವಿಶೇಷ.
ಪಿ.ಟಿ. ಉಷಾ, ಎಸ್. ಫಂಗ್ನಾನ್ ಕೊನ್ಯಾಕ್, ಫೌಜಿಯಾ ಖಾನ್, ಸುಲ್ತಾನ್ ದಿಯೊ, ವಿ. ವಿಜಯ್‌ಸಾಯಿ ರೆಡ್ಡಿ, ಘನಶ್ಯಾಮ್ ತಿವಾರಿ, ಎಲ್. ಹನುಮಂತಯ್ಯ ಮತ್ತು ಸುಖೇಂದು ಶೇಖರ್ ರೇ ಅವರು ಹೊಸದಾಗಿ ರಚನೆಯಾಗಿರುವ ಮಂಡಳಿಯಲ್ಲಿದ್ದಾರೆ.
ಈ ಕುರಿತು ರಾಜ್ಯಸಭೆ ಸದಸ್ಯರಿಗೆ ಮಾಹಿತಿ ನೀಡಿದ ಧನಕರ್ ಅವರು, ಪುನರ್‌ರಚನೆಯಾದ ಮಂಡಳಿಯು ಜುಲೈ 17ರಿಂದಲೇ ಜಾರಿಗೆ ಬಂದಿದೆ ಎಂದರು.
ಈ ಮಂಡಳಿಯಲ್ಲಿ ಆರು ಮಂದಿ ರಾಜ್ಯಸಭಾ ಸದಸ್ಯರಿರುತ್ತಾರೆ. ಸಭಾಪತಿ ಅವರು ಪುನಃ ಹೊಸ ಮಂಡಳಿ ರಚಿಸವವರೆಗೂ ಈಗ ನೇಮಕವಾಗಿರುವ ಮಂಡಳಿಯ ಸದಸ್ಯರು ತಮ್ಮ ಕರ್ತವ್ಯಾವಧಿ ಹೊಂದಿರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.