ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸೀದಿಯ ಅನಧಿಕೃತ ಭಾಗ ನೆಲಸಮ ವಿರೋಧಿಸಿ ಪ್ರತಿಭಟನೆ: ಧಾರಾವಿ ಕೆಲಕಾಲ ಉದ್ವಿಗ್ನ

Published : 21 ಸೆಪ್ಟೆಂಬರ್ 2024, 13:38 IST
Last Updated : 21 ಸೆಪ್ಟೆಂಬರ್ 2024, 13:38 IST
ಫಾಲೋ ಮಾಡಿ
Comments

ಮುಂಬೈ: ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮಸೀದಿಯ ಭಾಗವನ್ನು ನೆಲಸಮ ಮಾಡುವ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ನೂರಾರು ನಿವಾಸಿಗಳು ಪ್ರತಿಭಟನೆ ನಡೆಸಿದ್ದರಿಂದ ಧಾರಾವಿ ಕೊಳಗೇರಿಯಲ್ಲಿ ಶನಿವಾರ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನದ ವೇಳೆಗೆ ಮಸೀದಿಯ ಟ್ರಸ್ಟಿಗಳು, ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಒತ್ತುವರಿ ತೆರವಿಗೆ ನಾಲ್ಕರಿಂದ ಐದು ದಿನ ಕಾಲಾವಕಾಶ ಕೇಳಿದರು. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ನೀಡಿದ ನಂತರ ಪರಿಸ್ಥಿತಿ ಸುಧಾರಿಸಿತು.

ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮೆಹಬೂಬ್–ಎ–ಸುಭಾನಿ ಮಸೀದಿಯ ಅನಧಿಕೃತ ಭಾಗಗಳನ್ನು ನೆಲಸಮ ಮಾಡಲು ಬಿಎಂಸಿ ಅಧಿಕಾರಿಗಳು ಬೆಳಿಗ್ಗೆ 9 ಗಂಟೆ ಸುಮಾರಿಗೆ 90 ಅಡಿ ರಸ್ತೆ ತಲುಪಿದ್ದರು.  ಕೂಡಲೇ ನಿವಾಸಿಗಳು ಒಟ್ಟಿಗೆ ಸೇರಿ ಅಧಿಕಾರಿಗಳು ಮಸೀದಿ ಇರುವ ಪ್ರದೇಶ ಪ್ರವೇಶಿಸುವುದನ್ನು ತಡೆದರು. ನಂತರ ಧಾರಾವಿ ಪೊಲೀಸ್ ಠಾಣೆ ಎದುರು ರಸ್ತೆ ಮೇಲೆಯೇ ಕುಳಿತು ಅಧಿಕಾರಿಗಳ ನಡೆ ವಿರುದ್ಧ ಪ್ರತಿಭಟಿಸಿದರು’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT