ನವದೆಹಲಿ: ‘ಮುಂದಿನ ವರ್ಷ ದೇಶದಲ್ಲಿ ಗಣತಿ ನಡೆಯಲಿದೆ. ಈ ಬಾರಿಯ ಗಣತಿಯು ಇದೇ ಮೊದಲ ಬಾರಿಗೆ ಡಿಜಿಟಲ್ ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಈ ಕಾರಣದಿಂದಾಗಿ ಸೈಬರ್ ದಾಳಿಗಳು ನಡೆಯದಂತೆ ದತ್ತಾಂಶ ಸುರಕ್ಷತೆಗೆ ಒತ್ತು ನೀಡುತ್ತಿದ್ದೇವೆ’ ಎಂದು ಕೇಂದ್ರ ಗೃಹ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದೆ.

‘ಎಂಡ್ ಟು ಎಂಡ್ ಎನ್ಕ್ರಿಪ್ಷನ್, ಗಣತಿ ಮಾಡುವವರ ದೃಢೀಕರಣ ಸೇರಿದಂತೆ ದತ್ತಾಂಶ ಭದ್ರತೆಗಾಗಿ ವಿಶೇಷ ಸೈಬರ್ ತಂಡವೊಂದು ಹಲವು ಡಿಜಿಟಲ್ ಟೂಲ್ಗಳ ಮೂಲಕ 24 ಗಂಟೆಯು ನಿರಂತರವಾಗಿ ಗಣತಿಯ ದತ್ತಾಂಶಗಳ ಮೇಲೆ ನಿಗಾ ಇರಿಸಲಿದೆ’ ಎಂದು ಸಚಿವಾಲಯ ಮಾಹಿತಿ ನೀಡಿದೆ.

‘ಮೊಬೈಲ್ ಮತ್ತು ಪೋರ್ಟಲ್ಗಳ (ಜನರು ಸ್ವಯಂ ಆಗಿಯೂ ಮಾಹಿತಿಗಳನ್ನು ತುಂಬಬಹುದಾಗಿದೆ) ಮೂಲಕ ಸಂಗ್ರಹಿಸಲಾಗುವ ಗಣತಿ ದತ್ತಾಂಶಗಳು ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಸ್ವರೂಪದಲ್ಲಿ ಇರಲಿವೆ. ಗಣತಿ ಮಾಡುವವರಿಗೆ ಪ್ರತ್ಯೇಕ ಐಡಿಗಳನ್ನು ನೀಡಲಾಗುತ್ತದೆ. ಇವರ ಲಾಗ್ ಇನ್ಗಾಗಿ ದೃಢೀಕರಣ ವ್ಯವಸ್ಥೆ ಇರಲಿದೆ’ ಎಂದು ಮಾಹಿತಿ ನೀಡಿದೆ.

ಸ್ಥಾಯಿ ಸಮಿತಿ ಶಿಫಾರಸುಗಳು?

l ಡಿಜಿಟಲ್ ಸ್ವರೂಪದಲ್ಲಿ ಗಣತಿ ನಡೆಯುತ್ತಿರುವುದರಿಂದ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.
ಇದಕ್ಕಾಗಿ ರೂಪಿಸಲಾದ ಪೋರ್ಟಲ್ಗಳನ್ನು ತಪ್ಪು ಬಳಕೆ ಮಾಡಿಕೊಳ್ಳದಂತೆಯೂ ಜಾಗೃತಿ ಮೂಡಿಸಬೇಕು

l ಗಣತಿ ಪ್ರಕ್ರಿಯೆಯು ಸುಗಮವಾಗಿ ಸಾಗಲು ಅತ್ಯುತ್ತಮವಾದ ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಜೊತೆಗೆ, ಗಣತಿಯ ಮಾಹಿತಿಗಳನ್ನು ಶೀಘ್ರವಾಗಿ ಬಹಿರಂಗ ಮಾಡಬೇಕು

l ಗಣತಿ ಮಾಡುವವರಿಗೆ ತರಬೇತಿ ನೀಡುವುದು, ಡಿಜಿಟಲ್ ಮೂಲಸೌಕರ್ಯಗಳ ಸಿದ್ಧತೆ, ಪ್ರಕ್ರಿಯೆಯಲ್ಲಿ ತೊಡಕಾಗದಂತೆ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ, ಪರಸ್ಪರ ಸಹಕಾರದಿಂದ ಇರಬೇಕು

l ಗಣತಿ ಆರಂಭ, ಇದಕ್ಕಾಗಿ ಅನುದಾನ ಬಿಡುಗಡೆಯಿಂದ ಶುರುವಾಗಿ ಗಣತಿ ಮಾಹಿತಿ ಬಹಿರಂಗವಾಗುವ ದಿನಾಂಕಗಳನ್ನು ಒಳಗೊಂಡ ಎಲ್ಲ ಸಿದ್ಧತೆಯ ಮಾಹಿತಿಯನ್ನು ನೀಡಬೇಕು

ಕೇಂದ್ರ ಸರ್ಕಾರದ ಕ್ರಮಗಳೇನು?

l ಸಂದೇಶ ಅಥವಾ ಇ–ಮೇಲ್ಗಳ ಮೂಲಕ ಒಟಿಪಿ ಪಡೆದುಕೊಂಡು ದತ್ತಾಂಶ ಕಳ್ಳತನವನ್ನು ತಡೆಯಲು, ಸಂಗ್ರಹಿಸಲಾದ ದತ್ತಾಂಶಗಳನ್ನು ತಪ್ಪು ಬಳಕೆ ಮಾಡಿಕೊಳ್ಳದಂತೆ
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು

l ಹ್ಯಾಕ್ ಆಗುವುದನ್ನು ತಡೆಯಲು ಸರ್ವರ್ಗಳ ಡಿಜಿಟಲ್ ಭದ್ರತೆ ಹೆಚ್ಚಿಸುವುದು

l ಫೈರ್ವಾಲ್ಸ್ (ಸಾಫ್ಟವೇರ್ ಭದ್ರತಾ ವ್ಯವಸ್ಥೆ) ಭದ್ರತೆ

l ಗಣತಿಯಿಂದ ಪಡೆದುಕೊಳ್ಳಲಾದ ದೊಡ್ಡ ಪ್ರಮಾಣದ ದತ್ತಾಂಶಗಳನ್ನು ಸಂಗ್ರಹಿಸಿಡಲು ದೊಡ್ಡ ಬ್ಯಾಕ್ಅಪ್ ವ್ಯವಸ್ಥೆ ರೂಪಿಸಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.