ಕೋಲ್ಕತ್ತ (ಪಿಟಿಐ): ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದ ಬೆನ್ನಲ್ಲೇ ಬಂಗಾಳಿ ಚಲನಚಿತ್ರ ನಿರ್ದೇಶಕ ಅರಿಂದಮ್ ಸಿಲ್ ಅವರನ್ನು ಈಸ್ಟರ್ನ್ ಇಂಡಿಯಾ ನಿರ್ದೇಶಕರ ಸಂಘ (ಡಿಎಇಐ) ಅಮಾನತು ಮಾಡಿದೆ.

ಅರಿಂದಮ್ ಅವರು ಕೆಲ ತಿಂಗಳ ಹಿಂದೆ ಸಿನಿಮಾ ಸೆಟ್ನಲ್ಲಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿ ನಟಿಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ಆಯೋಗವು ವಿವರಣೆ ಕೇಳಿತ್ತು. ‘ನನ್ನ ವರ್ತನೆಯಿಂದ ನಟಿಗೆ ಅವಮಾನ ಉಂಟಾಗಿದ್ದರೆ, ಕ್ಷಮೆಯಾಚಿಸುತ್ತೇನೆ’ ಎಂದು ಸಿಲ್ ಹೇಳಿದ್ದರು.

ಅಮಾನತು ಕ್ರಮವು ತಕ್ಷಣದಿಂದಲೇ ಜಾರಿಯಾಗಿದೆ ಎಂದು ಡಿಎಇಐ, ಶನಿವಾರ ಬರೆದ ಪತ್ರದಲ್ಲಿ ತಿಳಿಸಿದೆ.

‘ನಿಮ್ಮ ವಿರುದ್ಧ ಮಾಡಲಾದ ಕೆಲವು ಆರೋಪಗಳು ಮತ್ತು ನಮಗೆ ಲಭ್ಯವಾಗಿರುವ ಪ್ರಾಥಮಿಕ ಸಾಕ್ಷ್ಯಗಳು, ಇಡೀ ಸಂಸ್ಥೆಯ ಘನತೆಗೆ ಕುಂದು ಉಂಟುಮಾಡುವಂತಿದೆ. ಆದ್ದರಿಂದ ಅನಿರ್ದಿಷ್ಟ ಅವಧಿಯವರೆಗೆ ಅಥವಾ ಆರೋಪಗಳಿಂದ ಮುಕ್ತರಾಗುವವರೆಗೆ ಸದಸ್ಯತ್ವದಿಂದ ಅಮಾನತುಗೊಳಿಸಲು ಡಿಎಇಐ ನಿರ್ಧರಿಸಿದೆ’ ಎಂದು ಸಂಘದ ಅಧ್ಯಕ್ಷ ಸುಬ್ರತಾ ಸೇನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.