ನವದೆಹಲಿ: ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಸಂಬಂಧಿಸಿದಂತೆ ಟಿವಿಕೆ ಮುಖ್ಯಸ್ಥ ವಿಜಯ್ ವಿರುದ್ಧ ಡಿಎಂಕೆ ನಾಯಕ ಇಳಂಗೋವನ್ ಕಿಡಿಕಾರಿದ್ದಾರೆ.

ಮೊದಲು ರಾಜಕೀಯ ಪಕ್ಷಗಳ ಬೆಂಬಲ ಪಡೆದು ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಎಂದು ಇಳಂಗೋವನ್ ಸಲಹೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಪ್ರಸ್ತಾವನೆಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಆದರೆ ವಿಜಯ್ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆಯಿದೆ ಎಂದು ಅವರು ಹೇಳಿದರು.

ಡಿಎಂಕೆ ನಾಯಕ ಇಳಂಗೋವನ್ ಹೇಳಿದ್ದೇನು?

107 ಸ್ಥಾನಗಳೊಂದಿಗೆ ವಿಜಯ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ನಂತರ 112 ಬೆಂಬಲ ಇದೆ ಎಂದು ಎರಡನೇ ಸಲ ಭೇಟಿ ಮಾಡಿದಾರು. ಈ ಹಂತದಲ್ಲಿ ರಾಜ್ಯಪಾಲರು ಬಹುಮತವಿಲ್ಲ ಎಂದು ಸಹಜವಾಗಿಯೇ ಹೇಳುತ್ತಾರೆ ಎಂದು ಇಳಂಗೋವನ್ ಹೇಳಿದರು.

ವಿಜಯ್ ಒಬ್ಬರೆ ರಾಜ್ಯಪಾಲರ ಬಳಿ ಹೋಗಿ ರಾಜ್ಯದಲ್ಲಿ ನಾವು ಅತಿದೊಡ್ಡ ಪಕ್ಷವಾಗಿ ಗೆಲುವು ಸಾಧಿಸಿದ್ದು ನಮಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿ ಎಂದು ಕೇಳಬೇಕಾಗಿತ್ತು. ಅತಿದೊಡ್ಡ ಪಕ್ಷ ಎಂಬ ನೆಲೆಯಲ್ಲಿ ಸರ್ಕಾರ ರಚಿಸಲು ಆಹ್ವಾನ ಸಿಗುತ್ತಿತ್ತು. ನಂತರ ಸದನದಲ್ಲಿ ಬಹುಮತ ಸಾಬೀತುಪಡಿಸಬಹುದಿತ್ತು. ಆದರೆ ಈಗ ಕೆಲವು ಪಕ್ಷಗಳ ಬೆಂಬಲ ಪಡೆದಿರುವುದರಿಂದ, ರಾಜ್ಯಪಾಲರು ಸಹಜವಾಗಿಯೇ ಪೂರ್ಣ ಬಹುಮತಕ್ಕಾಗಿ ಕಾಯುತ್ತಾರೆ ಎಂದು ಇಳಂಗೋವನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.