2011ರ ಜನಗಣತಿ ಅನುಸಾರ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಯೋಜಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಡಿಎಂಕೆ ಪಕ್ಷದ ಮುಖ್ಯಸ್ಥ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಈ ಕ್ರಮವು ಕೇಂದ್ರ ಸರ್ಕಾರ ಅಂಗೀಕರಿಸಿರುವ ಸಂವಿಧಾನ (128ನೇ ತಿದ್ದುಪಡಿ) ಮಸೂದೆ–2023 ಹಾಗೂ 2026ರಲ್ಲಿ ಸಮೀಕ್ಷೆ ನಡೆಸಿದ ನಂತರವೇ ಕ್ಷೇತ್ರ ಪುನರ್ವಿಂಗಡಣೆ ಮಾಡುವುದಾಗಿ ಈ ಹಿಂದೆ ಸರ್ಕಾರವೇ ತಳೆದಿದ್ದ ನಿಲುವಿಗೆ ವಿರುದ್ಧವಾಗಿದೆ' ಎಂದು ತಿಳಿಸಿದ್ದಾರೆ.

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿರುವ ವಿಧಾನಸಭಾ ಚುಣಾವಣೆ ಹೊತ್ತಿನಲ್ಲಿ ಲಾಭ ಮಾಡಿಕೊಳ್ಳುವ ಸಲುವಾಗಿ ಕೇಂದ್ರವು ಈ ನಿರ್ಧಾರ ಮಾಡಿರಬಹುದು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಹಿಂದೆಂದೂ ಇಂತಹ ಮಹತ್ವದ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಸಿಎಂ ಆರೋಪಿಸಿದ್ದಾರೆ.

ಡಿಎಂಕೆ ಮುಖ್ಯಸ್ಥರಾಗಿ ಹಾಗೂ ಶತಮಾನಕ್ಕೂ ಹಿಂದಿನಿಂದ ಮಹಿಳಾ ಸಬಲೀಕರಣದ ವಿಚಾರದಲ್ಲಿ ಮುಂಚೂಣಿಯಲ್ಲಿರುವ ದ್ರಾವಿಡ ಪರಂಪರೆಯ ಹೆಮ್ಮೆಯ ಪ್ರತಿನಿಧಿಯಾಗಿ, ಯಾವುದೇ ಷರತ್ತುಗಳಲ್ಲಿದೆ ಮಹಿಳಾ ಮೀಸಲು ಕ್ರಮವನ್ನು ಬೆಂಬಲಿಸುತ್ತೇವೆ ಎಂದಿರುವ ಸ್ಟಾಲಿನ್, ನ್ಯಾಯಯುತವಾಗಿ ಕ್ಷೇತ್ರ ವಿಂಗಡಣೆಯಾಗಬೇಕಿರುವುದು ನಮ್ಮ ಹಕ್ಕು ಎಂದೂ ಪ್ರತಿಪಾದಿಸಿದ್ದಾರೆ.

'ಎಂತಹದ್ದೇ ಸಂದರ್ಭ ಎದುರಾದರೂ ರಾಜ್ಯದಲ್ಲಿ ಸದ್ಯ ಇರುವ ಪ್ರಮಾಣಿತ ಅನುಪಾತಕ್ಕೆ ಅಡ್ಡಿಯಾಗಬಾರದು ಎಂಬುದು ನಮ್ಮ ಸ್ಥಿರವಾದ ನಿಲುವು' ಎಂದು ಸ್ಪಷ್ಟಪಡಿಸಿದ್ದಾರೆ.

'ಕ್ಷೇತ್ರ ಪುನರ್ವಿಂಗಡಣೆ, ಸ್ಥಾನಗಳನ್ನು ಹೆಚ್ಚಿಸುವುದು, ರಾಜ್ಯಗಳು ಪ್ರಸ್ತುತ ಹೊಂದಿರುವ ಪ್ರಾತಿನಿಧ್ಯದ ಪಾಲು ಮುಂದುವರಿಸಲು ಹಾಗೂ ಅಂತಹ ಪ್ರಾತಿನಿಧ್ಯವು 30 ವರ್ಷಗಳವರೆಗೆ ಮುಂದುವರಿಯಲಿದೆ ಎಂಬುದನ್ನು ಖಾತ್ರಿಪಡಿಸಲು ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಯನ್ನು ಜಾರಿಗೊಳಿಸಲು ಜೂನ್ ಆರಂಭದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯಬೇಕು ಎಂದು ಮನವಿ ಮಾಡುತ್ತೇನೆ' ಎಂದಿದ್ದಾರೆ.

ಸಮಯ ಬಂದಿದೆ: ಕನಿಮೋಳಿ

ಏತನ್ಮಧ್ಯೆ, ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೋಳಿ ಕರುಣಾನಿಧಿ ಅವರು, ಮಹಿಳೆಯರ ಪರಿಶ್ರಮ ಮತ್ತು ತ್ಯಾಗವನ್ನು ಗುರುತಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.