ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ತನ್ನ ‘ಪ್ರತಿಸ್ಪರ್ಧಿ’ ಎಐಎಡಿಎಂಕೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶುಕ್ರವಾರ ಘೋಷಿಸಿದೆ.

ವಿಜಯ್ ನೇತೃತ್ವದ ಟಿವಿಕೆಯನ್ನು ಅಧಿಕಾರದಿಂದ ದೂರವಿಡಲು ‘ಬದ್ಧ ರಾಜಕೀಯ ಪ್ರತಿಸ್ಪರ್ಧಿ’ ಎನಿಸಿಕೊಂಡಿರುವ ಎಐಎಡಿಎಂಕೆ ಮತ್ತು ಡಿಎಂಕೆ ಪರಸ್ಪರ ಒಂದಾಗಲಿವೆ ಎಂಬ ಊಹಾಪೋಹ ಎದ್ದಿದ್ದವು. ಈ ಬೆಳವಣಿಗೆ ತಮಿಳುನಾಡಿನ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಪಕ್ಷದ ಭವಿಷ್ಯದ ದೃಷ್ಟಿಯಿಂದ ಎಐಎಡಿಎಂಕೆಗೆ ಬೆಂಬಲ ನೀಡುವ ಆಲೋಚನೆಯನ್ನು ಆರಂಭದಲ್ಲಿ ಡಿಎಂಕೆ ಮಾಡಿತ್ತು. ‘ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸುವ ನಿಟ್ಟಿನಲ್ಲಿ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳಲು ಸಿದ್ದರಾಗಿರಿ’ ಎಂದು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಶಾಸಕರಿಗೆ ಸೂಚಿಸಿದ್ದರು.

ಆದರೆ, ಶುಕ್ರವಾರ ‘ಯು–ಟರ್ನ್’ ಹೊಡೆದಿರುವ ಡಿಎಂಕೆ, ಯಾವುದೇ ಸಮಯದಲ್ಲೂ ಎಐಎಡಿಎಂಕೆಗೆ ಬೆಂಬಲ ನೀಡುವುದಿಲ್ಲ ಎಂದಿದೆ. ಎಐಎಡಿಎಂಕೆ ಜತೆ ಕೈಜೋಡಿಸಲಿದೆ ಎಂದು ವರದಿಗಳನ್ನು ಡಿಎಂಕೆ ಸಹ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಅಲ್ಲಗಳೆದಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಮಹತ್ವದ್ದಾಗಿದೆ. ದುರದೃಷ್ಟವಶಾತ್, ತಮಿಳುನಾಡಿನ ಜನರು ಸ್ಪಷ್ಟ ಜನಾದೇಶ ನೀಡದಿದ್ದರೂ, ನಾವು ಅದನ್ನು ಗೌರವಿಸಬೇಕು’ ಎಂದು ಕನಿಮೊಳಿ ಹೇಳಿದ್ದಾರೆ.

‘ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ನೀಡುವ ಸುದ್ದಿ ಊಹಾಪೋಹ. ನಾನು ಡಿಎಂಕೆಗೆ ಸೇರಿದವಳಾಗಿದ್ದು, ಎಐಎಡಿಎಂಕೆ ಬಗ್ಗೆ ಮಾತನಾಡಲಾರೆ’ ಎಂದಿದ್ದಾರೆ.

ಆರು ಸ್ಥಾನಗಳನ್ನು ಹೊಂದಿರುವ ಎಡಪಕ್ಷಗಳು ಮತ್ತು ವಿಸಿಕೆಯು, ಎಐಎಡಿಎಂಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಕಡಿಮೆ ಎಂಬುದು ಮನವರಿಕೆಯಾದ ಬಳಿಕ ಡಿಎಂಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎನ್ನಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಈ ಮೂರು ಪಕ್ಷಗಳ ಬೆಂಬಲವಿಲ್ಲದೆ ಯಾರಿಗೂ ಸರ್ಕಾರ ರಚಿಸಲು ಸಾಧ್ಯವಿಲ್ಲ.

ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಉದ್ಯಮಿಯೊಬ್ಬರು ಎಐಎಡಿಎಂಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸುವ ಕಲ್ಪನೆಯನ್ನು ಡಿಎಂಕೆ ಮುಂದಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಈ ಕಲ್ಪನೆಗೆ ವಿರೋಧ ವ್ಯಕ್ತಪಡಿಸಿದ್ದ ಸ್ಟಾಲಿನ್, ಪಕ್ಷದ ಒಂದು ಬಣದ ಒತ್ತಾಯಕ್ಕೆ ಮಣಿದು ಎಐಎಡಿಎಂಕೆಗೆ ಬೆಂಬಲ ನೀಡಲು ಮನಸ್ಸು ಮಾಡಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.