ಚೆನ್ನೈ: ತಮಿಳುನಾಡು ಚುನಾವಣೆಯ ಮತ ಎಣಿಕೆ ನಿನ್ನೆ (ಮೇ 4) ಮುಕ್ತಾಯಗೊಂಡಿದ್ದು, ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಆಘಾತ ನೀಡಿದ ನಟ ವಿಜಯ್ ಅವರ ತಮಿಳಿಗ ವೆಟ್ರಿ ಖಳಗಂ (ಟಿವಿಕೆ) 108 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಡುವೆ ಡಿಎಂಕೆ ಪಕ್ಷದ ಹಾಲಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಿಂದ ಸೋಲು ಅನುಭವಿಸಿದ್ದಾರೆ.

ತಮಿಳುನಾಡು ಸಹಕಾರ ಸಚಿವರಾಗಿದ್ದ ಪೆರಿಯಕರುಪ್ಪನ್ ಅವರು ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ಸೀನಿವಾಸ ಸೇತುಪತಿ ಹಾಗೂ ಪೆರಿಯಕರುಪ್ಪನ್ ನಡುವೆ ನೇರಾ ಹಣಾಹಣಿ ಏರ್ಪಟ್ಟಿತ್ತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಕ್ಷೇತ್ರದಲ್ಲಿ ಕೇವಲ ಒಂದು ಹೆಚ್ಚುವರಿ ಮತದೊಂದಿಗೆ ಸೀನಿವಾಸ ಸೇತುಪತಿ ಅವರು ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆ ಮುಕ್ತಾಯಗೊಂಡಾಗ ಸೇತುಪತಿ ಅವರು 83,375 ಮತಗಳನ್ನು ಪಡೆದುಕೊಂಡರು. ಇದಕ್ಕಿಂತ ಒಂದು ಮತ ಕಡಿಮೆ ಪಡೆದ ಕೆ.ಆರ್. ಪೆರಿಯಕರುಪ್ಪನ್ ಕೇವಲ ಒಂದು ಮತದ ಹಿನ್ನಡೆಯೊಂದಿಗೆ ಸೋಲು ಅನುಭವಿಸಿದರು.

ಈ ಫಲಿತಾಂಶವು ತೀವ್ರ ರಾಜಕೀಯ ಆಸಕ್ತಿಯನ್ನು ಹುಟ್ಟುಹಾಕಿದ್ದು, ಪ್ರತಿಯೊಂದು ಮತದ ಮಹತ್ವವನ್ನು ಎತ್ತಿ ತೋರಿಸಿದೆ. ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) 108 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಡಿಎಂಕೆ 73 ಹಾಗೂ ಎಐಎಡಿಎಂಕೆ 53 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.