ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸೇರಿ ಸರ್ಕಾರ ರಚಿಸಲು ಮುಂದಾದರೆ ಟಿವಿಕೆಯ ಎಲ್ಲ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.

ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಇ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷಗಳು ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯ ವರದಿಗಳು ಬರುತ್ತಿದ್ದು, ಎರಡೂ ಪಕ್ಷಗಳು ಗುರುವಾರದ ಮಹತ್ವದ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ದ್ರಾವಿಡ ಪಕ್ಷಗಳ ನಡೆ ಬಗ್ಗೆ ಅನುಮಾನಗೊಂಡಿರುವ ಟಿವಿಕೆಯು ಎಲ್ಲ ಶಾಸಕರ ರಾಜೀನಾಮೆಯ ಎಚ್ಚರಿಕೆ ನೀಡಿದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಕ್ಷೇತ್ರಗಳಲ್ಲಿ ಗೆದ್ದಿರುವ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಸರ್ಕಾರ ರಚನೆಗೆ ರಾಜ್ಯಪಾಲರು ಟಿವಿಕೆಗೆ ಮೊದಲ ಆಹ್ವಾನ ನೀಡಬೇಕಿದೆ. ಆದರೆ, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಸರ್ಕಾರ ರಚನೆಗೆ ಟಿವಿಕೆಗೆ ಅವಕಾಶ ನೀಡಲು ಎರಡು ಬಾರಿ ನಿರಾಕರಿಸಿದ್ದಾರೆ. 118 ಶಾಸಕರ ಬಲವನ್ನು ತೋರಿಸಬೇಕೆಂದು ಸ್ಪಷ್ಟವಾಗಿ ಸೂಚಿಸಿರುವ ಅವರು, ಶಾಸಕರ ಬೆಂಬಲದ ಪತ್ರ ನೀಡುವಂತೆ ಕಟ್ಟಪ್ಪಣೆ ಮಾಡಿದ್ದಾರೆ.

ಟಿವಿಕೆಯ 108 , ಕಾಂಗ್ರೆಸ್ನ 5 ಸ್ಥಾನಗಳು ಸೇರಿ ವಿಜಯ್ ಬಳಿ ಈಗ 113 ಶಾಸಕರ ಬೆಂಬಲವಿದೆ. ಸಿಪಿಎಂ, ಸಿಪಿಐ ಮತ್ತು ವಿಸಿಕೆ ಪಕ್ಷಗಳ ತಲಾ ಇಬ್ಬರು ಶಾಸಕರು ಸೇರಿ 6 ಮಂದಿ ಟಿವಿಕೆ ಬೆಂಬಲಿಸಿದರೆ ವಿಜಯ್ ಹಾದಿ ಸುಗಮವಾಗಲಿದೆ. ಟಿವಿಕೆ ಈಗಾಗಲೇ ಈ ಮೂರೂ ಪಕ್ಷಗಳ ಬಾಗಿಲು ತಟ್ಟಿದೆ.

ಈ ನಡುವೆ ಮಹತ್ವದ ಸಭೆ ನಡೆಸಿರುವ ಡಿಎಂಕೆಯು ಸ್ಟಾಲಿನ್ ಅವರಿಗೆ ತುರ್ತು ನಿರ್ಣಯ ಕೈಗೊಳ್ಳುವ ಅಧಿಕಾರ ಸೇರಿದಂತೆ 4 ನಿರ್ಣಯಗಳನ್ನು ಕೈಗೊಂಡಿದೆ. ಸಭೆ ಬಳಿಕ ಮಾತನಾಡಿರುವ ಡಿಎಂಕೆ ವಕ್ತಾರರು, ಮತ್ತೊಂದು ಚುನಾವಣೆ ತಪ್ಪಿಸುವುದು ಮತ್ತು ಸ್ಥಿರ ಸರ್ಕಾರ ನೀಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

ಈ ಮಧ್ಯೆ, ಟಿವಿಕೆ ಸರ್ಕಾರ ರಚನೆ ಕಸರತ್ತು ನಡೆಯುತ್ತಿದ್ದು, ರಾಜಕೀಯ ಮೇಲಾಟಗಳ ಹಿನ್ನೆಲೆ ಮೇ 10ರವರೆಗೆ ಚೆನ್ನೈನಲ್ಲೇ ಇರುವಂತೆ ಶಾಸಕರಿಗೆ ಡಿಎಂಕೆ ಸೂಚಿಸಿದೆ.

ಪಳನಿಸ್ವಾಮಿ ಸಿಎಂ: ಡಿಎಂಕೆ ಹೊಸ ಲೆಕ್ಕ

ಈ ಬೆಳವಣಿಗೆಗಳ ನಡುವೆ ಇ. ಪಳನಿಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿ ಎಐಎಡಿಎಂಕೆಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಡಿಎಂಕೆ ಉನ್ನತ ಮೂಲಗಳು ಸ್ಪಷ್ಟಪಡಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.

ಒಂದೊಮ್ಮೆ, ವಿಜಯ್ ಮುಖ್ಯಮಂತ್ರಿಯಾದರೆ, ಎಂಜಿಆರ್ ರೀತಿ ಅವರನ್ನು ಮತ್ತೆ ತಡೆಯಲು ಸಾಧ್ಯವಿಲ್ಲ ಎಂದು ಉದಯನಿಧಿ ಸ್ಟಾಲಿನ್ ಸೇರಿದಂತೆ ಡಿಎಂಕೆಯ ಯುವ ನಾಯಕರು ಆತಂಕ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

ಎಐಎಡಿಎಂಕೆಯು ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದು, ಕೆಲ ನಾಯಕರು ಟಿವಿಕೆ ಜೊತೆ ಮೈತ್ರಿಗೆ ತುದಿಗಾಲ ಮೇಲೆ ನಿಂತಿದ್ದಾರೆ. ಹಿರಿಯ ನಾಯಕರು ಇದಕ್ಕೆ ಸೊಪ್ಪು ಹಾಕುತ್ತಿಲ್ಲ ಎಂದು ತಿಳಿದುಬಂದಿದೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲು ಅವರಿಗೆ 10 ಶಾಸಕರ ಬೆಂಬಲ ಬೇಕು. ಐದು ಶಾಸಕರಿರುವ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಲ್ಕು ಸ್ಥಾನಗಳನ್ನು. ಸಿಪಿಐ ಮತ್ತು ಸಿಪಿಐ-ಎಂ ತಲಾ ಎರಡು ಸ್ಥಾನಗಳನ್ನು ಹೊಂದಿವೆ. ನಿರ್ಗಮಿತ ಆಡಳಿತ ಪಕ್ಷವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 59 ಸ್ಥಾನಗಳನ್ನು ಗೆದ್ದಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನಗಳನ್ನು ಗೆದ್ದಿದೆ.

ಹೀಗಿದೆ ಲೆಕ್ಕಾಚಾರ:

ಡಿಎಂಕೆ 59, ಎಐಎಡಿಎಂಕೆ 47 ಸೇರಿ 107 ಶಾಸಕರ ಬೆಂಬಲವಿದೆ. ಈ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರಲು ಇನ್ನೂ 11 ಶಾಸಕರ ಅಗತ್ಯವಿದೆ. ಪಿಎಂಕೆ(4), ಕಾಂಗ್ರೆಸ್(5), ಸಿಪಿಎಂ(2), ಬಿಜೆಪಿ(1), ಸಿಪಿಐ(2) ಮತ್ತು ಸಿವಿಕೆ(2) ಪಕ್ಷಗಳ ಬಳಿ ಬೆಂಬಲ ಕೋರಬೇಕಿದೆ.

ಆದರೆ, ಈ ನಾಲ್ಕು ಪಕ್ಷಗಳ ಜೊತೆ ಈಗಾಗಲೇ ಟಿವಿಕೆ ಸಂಪರ್ಕ ಸಾಧಿಸಿದ್ದು, ಅಧಿಕಾರಕ್ಕೇರಲು ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಬೆಂಬಲ ಘೋಷಿಸಿದೆ.

ಆದರೆ, ಪ್ರಬಲ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಈ ಶಾಸಕರಿಗೆ ಗಾಳ ಹಾಕಿ ಕುದುರೆ ವ್ಯಾಪಾರಕ್ಕೆ ಮುಂದಾಗುವ ಆತಂಕ ಎದುರಾಗಿದೆ.
.ವಿಜಯ್ಗೆ ಬೆಂಬಲ ನೀಡುವ ಬಗ್ಗೆ ಸಿಪಿಐ, ಸಿಪಿಎಂ, ವಿಸಿಕೆ ಇಂದು ನಿರ್ಧಾರ.ಹೊರ್ಮುಜ್ ತೆರೆದು, ಮಾತುಕತೆಗೆ 30 ದಿನಗಳ ಯುದ್ಧ ವಿರಾಮ: ಅಮರಿಕ–ಇರಾನ್ ಚರ್ಚೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.