ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದೆ. ಈ ಪೈಕಿ ಔಸ್ಗ್ರಾಮ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಕಲಿತಾ ಮಾಝಿ ಅವರ ಗೆಲುವು ದೇಶದ ಗಮನ ಸೆಳೆದಿದೆ.

ತಿಂಗಳಿಗೆ ಕೇವಲ ₹2,500 ವೇತನಕ್ಕಾಗಿ ನಾಲ್ಕು ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಲಿತಾ ಮಾಝಿ, ಈಗ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ. ಚುನಾವಣೆಯಲ್ಲಿ 1,07,692 ಮತಗಳನ್ನು ಪಡೆದ ಅವರು, ಪ್ರತಿಸ್ಪರ್ಧಿ ಶ್ಯಾಮ ಪ್ರಸನ್ನ ಲೋಹರ್ ವಿರುದ್ಧ 12,535 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ಸಾಮಾನ್ಯ ಕಾರ್ಯಕರ್ತೆಯ ಅಸಾಧಾರಣ ಸಾಧನೆ

ಗುಸ್ಕಾರಾ ಪುರಸಭೆಯ ನಿವಾಸಿಯಾದ ಕಲಿತಾ ಮಾಝಿ, 2021ರ ಚುನಾವಣೆಯಲ್ಲೂ ಸ್ಪರ್ಧಿಸಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲುಂಡಿದ್ದರು. ಆದರೂ, ಜನರೊಂದಿಗಿನ ಅವರ ಒಡನಾಟವನ್ನು ನಂಬಿದ ಬಿಜೆಪಿ ಹೈಕಮಾಂಡ್ ಈ ಬಾರಿಯೂ ಅವರಿಗೆ ಟಿಕೆಟ್ ನೀಡಿತ್ತು. ಕಡು ಬಡತನದ ನಡುವೆಯೂ ಚುನಾವಣಾ ಕಣಕ್ಕಿಳಿದಿದ್ದ ಅವರ ಈ ಯಶಸ್ಸು ಪ್ರಜಾಪ್ರಭುತ್ವದ ನಿಜವಾದ ಆಶಯಕ್ಕೆ ಸಾಕ್ಷಿಯಾಗಿದೆ. ಅಡುಗೆ ಮನೆಯಿಂದ ವಿಧಾನಸಭೆಯವರೆಗೆ ಸಾಗಿಬಂದ ಕಲಿತಾ ಮಾಝಿ ಅವರ ಈ ಪಯಣಕ್ಕೆ ಸಿಕ್ಕ ದೊಡ್ಡ ಜಯವೆಂದೇ ವಿಶ್ಲೇಷಿಸಲಾಗುತ್ತಿದೆ.

ಯಾರು ಈ ಕಲಿತಾ ಮಾಝಿ..?

ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಕಲಿತಾ ಮಾಝಿ (37) ಅವರು ನಾಲ್ಕೈದು ಮನೆಗಳಲ್ಲಿ ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಹಾಗೂ ಅಡುಗೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಮುಂಜಾನೆ 5 ಗಂಟೆಯಿಂದಲೇ ಕೆಲಸ ಆರಂಭಿಸುತ್ತಿದ್ದ ಇವರನ್ನು ಮಾಲೀಕರು ಅತ್ಯಂತ ಶಿಸ್ತುಬದ್ಧ ಹಾಗೂ ನಂಬಿಕಸ್ಥ ಮಹಿಳೆ ಎಂದು ಕರೆಯುತ್ತಿದ್ದರು. ಆ ಕಷ್ಟದ ಜೀವನದ ನಡುವೆಯೂ ಅವರು ತಮ್ಮ ಹಳ್ಳಿಯ ತಳಮಟ್ಟದ ಜನರೊಂದಿಗೆ ಆಳವಾದ ಒಡನಾಟ ಹೊಂದಿದ್ದರು.

ಕೆಲಸದ ನಡುವೆಯೇ ಚುನಾವಣಾ ಪ್ರಚಾರ..

ಬಿಜೆಪಿ ಇವರಿಗೆ ಟಿಕೆಟ್ ಘೋಷಿಸಿದಾಗ, ಆರಂಭದ ದಿನಗಳಲ್ಲಿ ಅವರು ಮನೆಗೆಲಸ ಮತ್ತು ಚುನಾವಣಾ ಪ್ರಚಾರ ಎರಡನ್ನೂ ನಿಭಾಯಿಸುತ್ತಿದ್ದರು. ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡರು. ಇವರ ಈ ಹೋರಾಟಕ್ಕೆ ಕುಟುಂಬ ಮತ್ತು ಮಗನ ಬೆಂಬಲದ ಜೊತೆಗೆ ಪಕ್ಷದ ಸ್ಥಳೀಯ ಕಾರ್ಯಕರ್ತರು ಸಾಥ್ ನೀಡಿದ್ದರು.

ಇನ್ನು, ಕಲಿತಾ ಅವರು ಮಹಿಳಾ ಸಬಲೀಕರಣ, ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಆರ್ಥಿಕವಾಗಿ ಹಿಂದುಳಿದವರ ಏಳಿಗೆಯನ್ನೇ ತಮ್ಮ ಪ್ರಚಾರದ ಪ್ರಮುಖ ಅಜೆಂಡಾ ಮಾಡಿಕೊಂಡಿದ್ದರು. ‘ಮನೆಗೆಲಸ ಮಾಡುವ ಮಹಿಳೆಯೂ ಶಾಸಕಿಯಾಗಬಲ್ಲಳು ಎಂಬುದನ್ನು ನಾನು ತೋರಿಸಿಕೊಡಲು ಬಯಸುತ್ತೇನೆ. ನನ್ನಂತಹ ದೀನದಲಿತರ ಪರವಾಗಿ ನಾನು ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಅವರು ಪ್ರಚಾರದ ವೇಳೆ ಭಾವುಕರಾಗಿ ನುಡಿಯುತ್ತಿದ್ದರು.

ತೃಣಮೂಲ ಕಾಂಗ್ರೆಸ್ನ ಪ್ರಬಲ ಅಭ್ಯರ್ಥಿ ಶ್ಯಾಮ ಪ್ರಸನ್ನ ಲೋಹರ್ ವಿರುದ್ಧ ಇವರು ಸಾಧಿಸಿದ ಗೆಲುವು, ಬಂಗಾಳದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಗಮನಾರ್ಹ ಬದಲಾವಣೆ ಎಂದು ಬಣ್ಣಿಸಲಾಗುತ್ತಿದೆ. ಮನೆಗೆಲಸದಿಂದ ವಿಧಾನಸಭೆಯವರೆಗೆ ಸಾಗಿಬಂದ ಕಲ್ಪನಾ ಅವರ ಪಯಣ ಈಗ ಇಡೀ ರಾಜ್ಯದಲ್ಲಿ ಚರ್ಚೆಯ ವಿಷಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.