ಮಥುರಾ: ಯುಮುನಾ ನದಿ ಸ್ವಚ್ಛತೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಶುಕ್ರವಾರ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಗೆ ಜಿರಳೆ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

ಇಂದು(ಶನಿವಾರ) ಅದೇ ವೇಷದಲ್ಲಿ ಬೃಂದಾವನದ ಬಿಹಾರ್ ಘಾಟ್ ಬಳಿಯ ಚರಂಡಿಯೊಳಗೆ ಇಳಿದು, ಕಲುಷಿತ ನದಿಯ ದುಸ್ಥಿತಿಯ ಬಗ್ಗೆ ದನಿ ಎತ್ತಿದ್ದಾರೆ.

‘ನದಿಯು ಕಲುಷಿತಗೊಳ್ಳುತ್ತಿದೆ. ಸಂಸ್ಕರಣೆ ಮಾಡದೆ ಚರಂಡಿ ನೀರನ್ನು ಯಮುನಾ ನದಿಗೆ ಏಕೆ ಬಿಡಲಾಗುತ್ತಿದೆ? ನದಿ ಸ್ವಚ್ಛವಾಗುವವರೆಗೂ ಹೋರಾಡುತ್ತೇನೆ’ ಎಂದು ಹೇಳಿದ್ದಾರೆ.

‘ಯಮುನಾ ನದಿಯ ಮಾಲಿನ್ಯದ ಕುರಿತು ಕಣ್ಣು ಮುಚ್ಚಿ ಕುಳಿತಿರುವ ಅಸಮರ್ಥ ಅಧಿಕಾರಿಗಳ ಕಣ್ಣು ತೆರೆಸಲು ನಾನು ಜಿರಳೆ ವೇಷ ಧರಿಸಬೇಕಾಯಿತು’ ಎಂದು ಅವರು ತಿಳಿಸಿದ್ದಾರೆ.

‘ಮಹಾನಗರ ಪಾಲಿಕೆ ಕಚೇರಿಯಿಂದ ನನಗೆ ಬೆದರಿಕೆ ಕರೆಗಳು ಬಂದಿವೆ. ಆದರೆ ಈ ಉದ್ದೇಶಕ್ಕಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧನಾಗಿದ್ದೇನೆ’ ಎಂದೂ ಹೇಳಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಜಗ್ ಪ್ರವೇಶ್, ‘ಅವರನ್ನು(ದೀಪಕ್ ಶರ್ಮಾ) ಮಾತುಕತೆಗೆ ಆಹ್ವಾನಿಸಿದ್ದರೂ ಬರಲಿಲ್ಲ’ ಎಂದು ಹೇಳಿದ್ದಾರೆ.

‘ದೀಪಕ್ ಶರ್ಮಾ ಅವರಿಗೆ ನಿನ್ನೆ ಸಂಜೆ ಮತ್ತು ಇಂದು ಬೆಳಿಗ್ಗೆ ಕರೆ ಮಾಡಿ, ಮಾತುಕತೆಗೆ ಆಹ್ವಾನಿಸಿದ್ದೇವು. ಆದರೆ, ಅವರು ಬರಲಿಲ್ಲ. ಅವರು ತಮ್ಮ ಕಳವಳಗಳನ್ನು ನಮ್ಮ ಮುಂದೆ ಇಡಲು ಕನಿಷ್ಠ ನಮ್ಮನ್ನು ಭೇಟಿಯಾಗಬೇಕಿತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.