ಚೆನ್ನೈ: ಈಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ‘ಮೋಸದಿಂದ’ ಮತದಾನ ಮಾಡಿರುವ ಆರೋಪದಡಿ ಬ್ರಿಟನ್, ಕೆನಡಾ ಹಾಗೂ ಶ್ರೀಲಂಕಾದ ಹತ್ತು ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ವಿದೇಶಿ ಪ್ರಜೆಗಳು ಮೋಸದಿಂದ ಮತದಾನ ಮಾಡಿದ್ದಾರೆ’ ಎಂಬ ಆರೋಪದ ಕುರಿತಂತೆ ಪೊಲೀಸರು ನೀಡಿರುವ ವರದಿ ಆಧರಿಸಿ ಚುನಾವಣಾ ಆಯೋಗವು ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ವಿದೇಶದ ಪ್ರಜೆಗಳು ತಮ್ಮ ದೇಶಗಳಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಹೋದ ಸಂದರ್ಭ ಅಧಿಕಾರಿಗಳು ಬೆರಳಿನಲ್ಲಿದ್ದ ಅಳಿಸಲಾಗದ ಶಾಯಿಯನ್ನು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದರಿಂದ, ಈ ಪ್ರಕರಣ ಗೊತ್ತಾಗಿದೆ.

ಮತ ಚಲಾಯಿಸಿದ ಆರೋಪದ ಮೇಲೆ ಒಂಬತ್ತು ಪ್ರಕರಣಗಳಲ್ಲಿ ಹತ್ತು ವಿದೇಶಿ ಪ್ರಜೆಗಳನ್ನು ಚೆನ್ನೈ, ಮದುರೈ ವಿಮಾನ ನಿಲ್ದಾಣಗಳಲ್ಲಿ ಬಂಧಿಸಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮತ ಚಲಾಯಿಸಲು ಭಾರತೀಯ ಪ್ರಜೆಗಳು ಎಂಬಂತೆ ಬಿಂಬಿಸಿಕೊಳ್ಳಲು ಗುರುತಿನ ನಕಲಿ ದಾಖಲೆ ಬಳಸಿದ್ದಾರೆ. ಬೆರಳಿನಲ್ಲಿದ್ದ ಶಾಯಿಯನ್ನು ಗಮನಿಸಿ ಕ್ರಮಕೈಗೊಳ್ಳಲಾಗಿದೆ. ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.