ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ | ಬೆಟ್ಟದ ಮೇಲೆ ಸಿಲುಕಿಕೊಂಡ 8 ಮಂದಿ ರಕ್ಷಿಸಿದ ಎಸ್‌ಡಿಇಆರ್‌ಎಫ್

Published : 4 ಆಗಸ್ಟ್ 2024, 10:34 IST
Last Updated : 4 ಆಗಸ್ಟ್ 2024, 10:34 IST
ಫಾಲೋ ಮಾಡಿ
Comments

ಶಿವಪುರಿ: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬೆಟ್ಟವೊಂದರ ದೇವಸ್ಥಾನದ ಬಳಿ ಹೊಳೆ ನೀರಿನ ಮಟ್ಟ ಹೆಚ್ಚಿದ ಕಾರಣದಿಂದಾಗಿ ಸಿಲುಕಿಕೊಂಡಿದ್ದ 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಶಿವಪುರಿ ಜಿಲ್ಲೆಯ ಪೊಹ್ರಿ ಪಟ್ಟಣದ ಕೇದಾರೇಶ್ವರ ದೇವಸ್ಥಾನದ ಬಳಿ ಶನಿವಾರಈ ಘಟನೆ ನಡೆದಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ (ಎಸ್‌ಡಿಒಪಿ) ಸುರ್ಜೀತ್ ಸಿಂಗ್ ಭಡೋರಿಯಾ ಮಾಹಿತಿ ನೀಡಿದ್ದಾರೆ.

ಹೊಳೆ ನೀರು ದಿಢೀರ್‌ ಹೆಚ್ಚಾದ ಪರಿಣಾಮ ಎಂಟು ಮಂದಿ ಬೆಟ್ಟದ ಮೇಲಿನ ದೇವಾಲಯದಲ್ಲಿ ಸಿಲುಕಿಕೊಂಡಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ (ಎಸ್‌ಡಿಇಆರ್‌ಎಫ್) ಸಿಲುಕೊಂಡವರನ್ನು ರಕ್ಷಿಸಿದ್ದಾರೆ. ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಸುರ್ಜೀತ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT