ನವದೆಹಲಿ: ‘ಸಂವಿಧಾನದತ್ತ ಆಡಳಿತವು ಮುಂದುವರಿಯಬೇಕು ಎಂದಾದರೆ, ಚುನಾವಣಾ ಆಯೋಗವೂ ಸೇರಿದಂತೆ ಭಾರತದ ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತವಾಗಿ ಕೆಲಸ ಮಾಡಬೇಕು’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟರು.

ಪಟ್ನಾದ ಚಾಣಕ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ‘ಹಕ್ಕುಗಳ ಆಚೆಗಿನ ಸಾಂವಿಧಾನಿಕತೆ: ವ್ಯವಸ್ಥೆ ಯಾಕೆ ಮುಖ್ಯವಾಗುತ್ತದೆ’ ವಿಷಯದ ಕುರಿತು ನ್ಯಾ. ನಾಗರತ್ನ ಅವರು ಇತ್ತೀಚೆಗೆ ಉಪನ್ಯಾಸ ನೀಡಿದ್ದರು.

‘ಚುನಾವಣೆಯ ಸಮಗ್ರತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಪ್ರಾಥಮಿಕ ಕೆಲಸ. ಚುನಾವಣೆ ನಡೆಸುವ ಸಂಸ್ಥೆಯೊಂದು ಚುನಾವಣಾ ಕಣದಲ್ಲಿರುವವರ ಮೇಲೆಯೇ ಅವಲಂಬಿತವಾದರೆ, ಇಡೀ ಚುನಾವಣಾ ಪ್ರಕ್ರಿಯೆಯು ತಟಸ್ಥ ಧೋರಣೆಯೊಂದಿಗೆ ಇರುವುದಿಲ್ಲ’ ಎಂದರು.

‘ರಾಜಕೀಯ ಪ್ರಕ್ರಿಯೆಯು ಕೆಲವು ವಿಚಾರಗಳಲ್ಲಿ ತಟಸ್ಥವಾಗಿರುವುದಿಲ್ಲ. ಇಂಥ ವಿಚಾರಗಳಲ್ಲಿ ತಟಸ್ಥ ನಿಲುವು ಇರಬೇಕು ಜೊತೆಗೆ ವಿಷಯ ತಜ್ಞತೆಯೂ ಬೇಕು ಎಂಬುದಕ್ಕಾಗಿ ಚುನಾವಣಾ ಆಯೋಗ, ಸಿಎಜಿ, ಹಣಕಾಸು ಆಯೋಗದಂಥ ಸ್ವಾಯತ್ತ ಸಂಸ್ಥೆಗಳನ್ನು ರೂಪಿಸಲಾಗಿದೆ. ಇವುಗಳು ರಾಜಕೀಯ ಪ್ರಕ್ರಿಯೆಯಿಂದ ದೂರ ಇರುವುದು ಬಹಳ ಮುಖ್ಯವಾಗುತ್ತವೆ’ ಎಂದರು.

‘ದೇಶವೊಂದರ ಸ್ವಾಯತ್ತ ಸಂಸ್ಥೆಗಳು ನಿಯಂತ್ರಿಸುವ ಕಾರ್ಯ ಮೊಟಕುಗೊಳಿಸಿದಾಗ ಸಾಂವಿಧಾನಿಕ ವ್ಯವಸ್ಥೆ ಕುಸಿಯುತ್ತದೆ. ಹೀಗೆ ಕುಸಿತ ಕಂಡ ವ್ಯವಸ್ಥೆಯೊಳಗೆ ಚುನಾವಣೆ ನಡೆಯಬಹುದು, ನ್ಯಾಯಾಲಯಗಳು ಕೆಲಸ ಮಾಡಬಹುದು, ಸಂಸತ್ತು ಕಾನೂನು ರೂಪಿಸಬಹುದು. ಆಗ ಪ್ರಭುತ್ವಕ್ಕೆ ನಿಯಂತ್ರಣವೇ ಇರುವುದಿಲ್ಲ. ಯಾಕೆಂದರೆ, ದೇಶದಲ್ಲಿ ಸಂವಿಧಾನದತ್ತ ವ್ಯವಸ್ಥೆಯೇ ಇರುವುದಿಲ್ಲವಲ್ಲ’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-384952588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.