ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ಮತ್ತು ಚುನಾವಣಾ ಆಯೋಗದ ಜತೆ ಬುಧವಾರ ನಡೆದ ಸಭೆಯು ತೀವ್ರ ವಾಗ್ವಾದದೊಂದಿಗೆ ಕೊನೆಗೊಂಡಿತು.

‘ಮುಖ್ಯ ಚುನಾವಣಾ ಆಯುಕ್ತರು, ಸಭೆಯಿಂದ ತೊಲಗಿ ಎಂದು ಹೇಳಿ ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು’ ಎಂದು ಟಿಎಂಸಿ ಆರೋಪಿಸಿದ್ದರೆ, ‘ಟಿಎಂಸಿ ನಾಯಕರು ಏರಿದ ಧ್ವನಿಯಲ್ಲಿ ಕೂಗಾಡಿದರು’ ಎಂದು ಚುನಾವಣಾ ಆಯೋಗ ದೂರಿದೆ.

ಟಿಎಂಸಿ ನಾಯಕ, ರಾಜ್ಯಸಭಾ ಸದಸ್ಯ ಡೆರಿಕ್ ಓಬ್ರಯಾನ್, ಉಪನಾಯಕಿ ಸಾಗರಿಕಾ ಘೋಷ್, ಸಂಸದರಾದ ಸಾಕೇತ್ ಗೋಖಲೆ, ಮೇನಕಾ ಗುರುಸ್ವಾಮಿ ಅವರನ್ನು ಒಳಗೊಂಡ ನಿಯೋಗವು ಆಯೋಗದ ಪೂರ್ಣ ಪೀಠವನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಒಂಬತ್ತು ಪತ್ರಗಳನ್ನು ಸಭೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದೇವೆ. ಆದರೆ ಅದಕ್ಕೆ ಸ್ವೀಕೃತಿ ನೀಡಲಿಲ್ಲ’ ಎಂದು ಸಭೆಯ ಬಳಿಕ ಓಬ್ರಯಾನ್ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಚುನಾವಣಾ ಅಧಿಕಾರಿಗಳಿಗೆ ಬಿಜೆಪಿ ಸಖ್ಯ’

‘ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೆಲ ಚುನಾವಣಾ ಅಧಿಕಾರಿಗಳು ಬಿಜೆಪಿ ಜತೆ ಸಖ್ಯ ಹೊಂದಿದ್ದಾರೆ. ಆ ಕುರಿತ ಆರು ನಿದರ್ಶನಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ. ಅಲ್ಲದೆ ಆ ಅಧಿಕಾರಿಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದೆವು’ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯು (ಸಿಇಸಿ), ‘ನಂದಿಗ್ರಾಮದ ಸ್ಥಳೀಯ ಬಿಜೆಪಿ ನಾಯಕರ ಜತೆಗಿನ ಸಂಬಂಧದ ಕುರಿತ ಮಾಹಿತಿಯನ್ನೂ ಆಯೋಗಕ್ಕೆ ತಿಳಿಸಿದ್ದೇವೆ’ ಎಂದರು.

‘ಈ ರೀತಿಯ ಕಳಂಕಿತ ಅಧಿಕಾರಿ ಗಳಿರುವಾಗ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹೇಗೆ ನಡೆಸುತ್ತೀರಿ ಎಂದು ನಾವು ಸಿಇಸಿ ಅನ್ನು ಪ್ರಶ್ನಿಸಿದೆವು’ ಎಂದು ಡೆರಿಕ್ ಹೇಳಿದರು.

ಮತ್ತೆ ನ್ಯಾಯಾಲಯದ ಮೊರೆ: ಮಮತಾ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವೇಳೆ ಪಟ್ಟಿಯಿಂದ ಅಳಿಸಿರುವ ಮತದಾರರ ಪರವಾಗಿ ಮತ್ತೆ ನ್ಯಾಯಾಲಯದ ಮೊರೆಹೋಗುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಿಳಿಸಿದರು.

ಎಸ್ಐಆರ್ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಕುರಿತು ಆಯೋಗ ಮಾಹಿತಿ ನೀಡಿದ ಬೆನ್ನಲ್ಲೇ ಮಮತಾ ಅವರಿಂದ ಈ ಹೇಳಿಕೆ ಬಂದಿದೆ.

ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಅವರು, ‘ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸುವ ಮೂಲಕ ಟಿಎಂಸಿಯನ್ನು ಸೋಲಿಸಲು ಸಾಧ್ಯವಿಲ್ಲ. ಆಯೋಗದ ಈ ಕ್ರಮವನ್ನು ಪ್ರಶ್ನಿಸಿ ಮತ್ತೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಹೇಳಿದರು

ಕೂಚ್ ಬಿಹಾರ್: ವೀಕ್ಷಕರ ವಿರುದ್ಧ ಕ್ರಮ

ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ದಕ್ಷಿಣ ಕ್ಷೇತ್ರದ ವೀಕ್ಷಕ ಅನುರಾಗ್ ಯಾದವ್ ಅವರನ್ನು ಚುನಾವಣಾ ಆಯೋಗ ಬುಧವಾರ ವೀಕ್ಷಕ ಹುದ್ದೆಯಿಂದ ತೆರವುಗೊಳಿಸಿದೆ.

ಅನುರಾಗ್ ಅವರಿಗೆ ಕ್ಷೇತ್ರದ ಮತಗಟ್ಟೆಗಳ ಸಂಖ್ಯೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂಬುದು ಕಂಡುಬಂದ ಬಳಿಕ ಆಯೋಗ ಈ ಕುರಿತು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕ್ಷೇತ್ರದಲ್ಲಿ ಎಷ್ಟು ಮತಗಟ್ಟೆಗಳಿವೆ ಎಂದು ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಕೇಳಿದಾಗ, ಅನುರಾಗ್ ಅವರು ಗೊಂದಲಕ್ಕೆ ಒಳಗಾದರು. ಮಾಹಿತಿ ನೀಡಲು ಕೆಲ ನಿಮಿಷ ತೆಗೆದುಕೊಂಡರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಿಇಸಿ, ಆ ವೀಕ್ಷಕರನ್ನು ಹುದ್ದೆಯಿಂದ ತೆಗೆಯುವಂತೆ ನಿರ್ದೇಶಿಸಿದರು’ ಎಂದು ಮೂಲಗಳು ತಿಳಿಸಿವೆ.
.ಮತದಾರರ ಪಟ್ಟಿಯಿಂದ ಹೆಸರು ಅಳಿಸಿದನ್ನು ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಮಮತಾ.ಎಸ್ಐಆರ್: ಮತುವಾ, ಅಲ್ಪಸಂಖ್ಯಾತರ ಹೆಸರು ಅಳಸಿ ಹಾಕಿದ ಇಸಿ–ಮಮತಾ ಬ್ಯಾನರ್ಜಿ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.