ನವದೆಹಲಿ: ತೆರವಾಗಿರುವ ರಾಜ್ಯಸಭೆಯ 2 ಸ್ಥಾನಗಳಿಗೆ ವಿವಿಧ 9 ರಾಜ್ಯಗಳಿಂದ ಸದಸ್ಯರನ್ನು ಆಯ್ಕೆ ಮಾಡಲು ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಬುಧವಾರ ಪ್ರಕಟಿಸಿದೆ.
ಪೀಯೂಷ್ ಗೋಯಲ್, ಸರ್ಬಾನಂದ ಸೊನೊವಾಲ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಸೇರಿ 10 ಮಂದಿ ಲೋಕಸಭೆಗೆ ಆಯ್ಕೆಯಾದ್ದರಿಂದ ಅವರು ಪ್ರತಿನಿಧಿಸುತ್ತಿದ್ದ ಸ್ಥಾನಗಳು ತೆರವಾಗಿವೆ. ಒಡಿಶಾ, ತೆಲಂಗಾಣದಿಂದ ಒಟ್ಟು 2 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ರಾಜ್ಯಸಭೆ ಸದಸ್ಯರಾಗಿದ್ದು, ಲೋಕಸಭೆಗೆ ಆಯ್ಕೆಯಾದ ಇತರರು: ಕಾಮಾಕ್ಯ ಪ್ರಸಾದ್ ತಾಸಾ, ವಿವೇಕ್ ಠಾಕೂರ್, ಉದಯನ್‌ರಾಜೆ ಭೋಸ್ಲೆ ಮತ್ತು ಬಿಪ್ಲಬ್ ಕುಮಾರ್ ದೇಬ್ (ಎಲ್ಲರೂ ಬಿಜೆಪಿ), ಮಿಸಾ ಭಾರ್ತಿ (ಆರ್‌ಜೆಡಿ), ದೀಪೇಂದರ್ ಸಿಂಗ್ ಹೂಡಾ (ಕಾಂಗ್ರೆಸ್), ಕೆ.ಸಿ.ವೇಣುಗೋಪಾಲ್ (ಇಬ್ಬರೂ ಕಾಂಗ್ರೆಸ್).
ಬಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದ ತೆಲಂಗಾಣದ ಕೆ.ಕೇಶವರಾವ್, ಬಿಜು ಜನತಾದಳ (ಬಿಜೆಪಿ) ಸದಸ್ಯರಾಗಿದ್ದ ಮಮತಾ ಮೊಹಂತಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ತೆರವಾಗಿರುವ ಈ ಸ್ಥಾನಗಳಿಗೆ ಚುನಾವಣೆ ನಡೆಸಲು ಆಗಸ್ಟ್ 11ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕಡೆಯ ದಿನ. ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದೆ. ಅದೇ ದಿನ ಸಂಜೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.