ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಗರ್‌ ಪ್ರಕರಣ: ಜೈಲಿನಲ್ಲಿ ಸ್ಟ್ರಾ, ಸಿಪ್ಪರ್‌ ಬಳಸಲು ಸ್ವಾಮಿ ಮನವಿ

Last Updated 7 ನವೆಂಬರ್ 2020, 8:36 IST
ಅಕ್ಷರ ಗಾತ್ರ

ಮುಂಬೈ: ಎಲ್ಗರ್‌ ಪರಿಷತ್‌ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಹಾಗೂ ಮಾವೋವಾದಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರು ತಮಗೆ ಜೈಲಿನಲ್ಲಿ ‘ಸ್ಟ್ರಾ’ ಹಾಗೂ ‘ಸಿಪ್ಪರ್‌’ ಬಳಸಲು ಅವಕಾಶ ನೀಡಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

82 ವರ್ಷದ ಸ್ಟ್ಯಾನ್‌ ಸ್ವಾಮಿ ಈಗ ನವಿಮುಂಬೈನ ತಲೋಜ ಜೈಲಿನಲ್ಲಿದ್ದಾರೆ.

2018ರ ಜನವರಿಯಲ್ಲಿ ನಡೆದ ಪುಣೆಯ ಭೀಮಾ– ಕೋರೆಗಾಂವ್‌ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಅಕ್ಟೋಬರ್‌ನಲ್ಲಿ ರಾಂಚಿಯ ಅವರ ಮನೆಯಲ್ಲಿ ಬಂಧಿಸಲಾಗಿತ್ತು.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು, ತಮಗೆ ಜೈಲಿನಲ್ಲಿ ‘ಸ್ಟ್ರಾ’ ಹಾಗೂ ‘ಸಿಪ್ಪರ್‌’ ಒದಗಿಸಬೇಕು ಎಂದು ತಮ್ಮ ಪರ ವಕೀಲರಾದ ಕೃತಿಕಾ ಅಗರ್‌ವಾಲ್‌ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಡಿ.ಇ. ಕೊತ್ತಲಿಕರ್‌ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೇ 26ರೊಳಗೆ ತಮ್ಮ ಅಭಿಪ್ರಾಯ ತಿಳಿಸಲು ರಾಷ್ಟ್ರೀಯ ತನಿಖಾ ದಳಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT