ನವದೆಹಲಿ : ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಜೈಲಿನಲ್ಲಿರುವ ಬಾರಾಮುಲ್ಲಾದ ಸಂಸದ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಮಧು ಜೈನ್ ಅವರ ಪೀಠವು ರಶೀದ್ ಅವರ ತಂದೆಯ ಅಂತ್ಯಕ್ರಿಯೆಗಾಗಿ ಜೂನ್ 2ರವರೆಗೆ ಜಾಮೀನು ನೀಡಿದೆ.

ಜಾಮೀನು ಅವಧಿಯಲ್ಲಿ, ರಶೀದ್ ಅವರೊಂದಿಗೆ ನಾಗರಿಕ ದಿರಿಸಿನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಇರುತ್ತಾರೆ. ಅವರು ತಿಹಾರ್ ಜೈಲಿನಿಂದ ಹೊರಟು ಶ್ರೀನಗರದಿಂದ ಹಿಂದಿರುಗುವವರೆಗೆ ಅವರೊಂದಿಗೆ ಇರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.

ರಶೀದ್ ಅವರು ಸ್ಮಶಾನ ಅಥವಾ ಇತರ ಯಾವುದೇ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಲು ಅನುಮತಿ ಇದೆ. ಆದರೆ, ಶ್ರೀನಗರ ಮತ್ತು ಲ್ಯಾಂಗೇಟ್ನಲ್ಲಿರುವ ಅವರ ನಿವಾಸದಿಂದ ಬೇರೆಡೆಗೆ ಹೋಗುವಂತಿಲ್ಲ ಎಂದು ಪೀಠ ಆದೇಶಿಸಿದೆ.

ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಂದೆ ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿ ನಿಧನರಾದರು ಎಂಬ ಆಧಾರದ ಮೇಲೆ ರಶೀದ್ ಅವರು ಮಧ್ಯಂತರ ಜಾಮೀನು ಕೋರಿದ್ದರು.

ಏಪ್ರಿಲ್ 28ರಂದು ಶ್ರೀನಗರದಲ್ಲಿರುವ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಭೇಟಿ ಮಾಡಲು ನ್ಯಾಯಾಲಯವು ಅವರಿಗೆ ಒಂದು ವಾರದ ಮಧ್ಯಂತರ ಜಾಮೀನು ನೀಡಿತ್ತು. ನಂತರ ರಶೀದ್ ತಮ್ಮ ತಂದೆಯನ್ನು ಚಿಕಿತ್ಸೆಗಾಗಿ ಇಲ್ಲಿನ ಏಮ್ಸ್ಗೆ ಸ್ಥಳಾಂತರಿಸಿದ ನಂತರ ಈ ಅವಧಿಯನ್ನು ಮೇ 10ರವರೆಗೆ ವಿಸ್ತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.