ಚಳವಳಿಗೆ ಅವಕಾಶವಿಲ್ಲ: ಲಡಾಖ್ ಲೆಫ್ಟಿನೆಂಟ್ ಗವರ್ನರ್
ಸೊನಂ ಅವರ ಬಂಧನದ ರದ್ದತಿಯನ್ನು ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಶನಿವಾರ ಸ್ವಾಗತಿಸಿದ್ದು ಈ ನಿರ್ಧಾರವು ಒಂದು ಸಕಾರಾತ್ಮಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ‘ಆದರೆ ಪ್ರದೇಶದಲ್ಲಿ ಚಳವಳಿ ಮತ್ತು ಹಿಂಸಾಚಾರಕ್ಕೆ ಅವಕಾಶ ಇಲ್ಲ’ ಎಂದು ಅವರು ಹೇಳಿದ್ದು ‘ಜನರ ಆಕಾಂಕ್ಷೆ ಮತ್ತು ಕಳವಳವನ್ನು ಸಂವಾದದ ಮೂಲಕ ಪರಿಹರಿಸಲಾಗುವುದು’ ಎಂದು ತಿಳಿಸಿದ್ದಾರೆ.