ಮುಂಬೈ: ‘ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸದಾ ದಾರಿಯೊಂದನ್ನು ತೆರೆದಿಟ್ಟುಕೊಳ್ಳಬೇಕು’ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ದತ್ತಾತ್ರೇಯ ಹೊಸಬಾಳೆ ಅವರ ನಿಲುವನ್ನು ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಬೆಂಬಲಿಸಿದ್ದಾರೆ.

‘ಜನಸಾಮಾನ್ಯರಿಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಇಬ್ಬರು ವ್ಯಕ್ತಿಗಳ ನಡುವೆ ಸ್ನೇಹವಿದ್ದಾಗ, ಎರಡು ರಾಷ್ಟ್ರಗಳ ನಡುವೆಯೂ ಸ್ನೇಹವಿರುತ್ತದೆ. ಇಂತಹ ಸಂವಹನಗಳು ಅತ್ಯಂತ ಪ್ರಮುಖ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ರಾಜತಾಂತ್ರಿಕತೆಯ ಮೂಲಕವಾಗಲಿ ಅಥವಾ ಕ್ರೀಡಾಕೂಟದ ಮೂಲಕವಾಗಲಿ ಎರಡೂ ದೇಶಗಳ ನಡುವೆ ಜನರ ನಡುವಿನ ಸಂಪರ್ಕ ಇರಬೇಕು. ಗಡಿಯ ಆಚೆ ಇರುವವರು ನಮ್ಮ ಜನ್ಮಜಾತ ಶತ್ರುಗಳಲ್ಲ ಎಂಬುದು ನಮ್ಮ ಜನರಿಗೂ ತಿಳಿಯಬೇಕು’ ಎಂದು ತಿಳಿಸಿದ್ದಾರೆ.

‘ವಿವಾದಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರೆ ನಾವು ಮಿಲಿಟರಿ ಬಲವನ್ನು ಬಳಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಭಾರತವು ಶಾಂತಿಯ ಭಾಷೆಯನ್ನು ಮಾತನಾಡುವ ದೇಶ. ಆದರೆ ಅಗತ್ಯ ಬಿದ್ದಲ್ಲಿ ಬಲಪ್ರಯೋಗಿಸಲು ನಾವು ಹಿಂಜರಿಯುವುದಿಲ್ಲ’ ಎಂದು ಹೇಳಿದ್ದಾರೆ.

ಹೊಸಬಾಳೆ ಹೇಳಿದ್ದೇನು?

‘ನಾವು(ಭಾರತ ಮತ್ತು ಪಾಕಿಸ್ತಾನ) ಒಂದೇ ದೇಶವಾಗಿದ್ದವರು. ನಮ್ಮ ಸಂಸ್ಕೃತಿಗಳಿಗೆ ಸಂಬಂಧಗಳಿವೆ. ಆದರೆ, ಮಾತುಕತೆ ಇಲ್ಲದ, ಸಂಬಂಧಗಳಲ್ಲಿ ಯಾವುದೇ ಸುಧಾರಣೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ಎರಡೂ ದೇಶಗಳು ತಲುಪಿವೆ. ಪಾಕಿಸ್ತಾನದ ಸೇನೆ ಮತ್ತು ರಾಜಕೀಯ ನಾಯಕರ ಬಗ್ಗೆ ಭಾರತದ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಈ ಸ್ಥಿತಿಯಿಂದ ಹೊರಬರಲು ಇರುವ ಒಂದೇ ಭರವಸೆ ಎಂದರೆ, ಅದು ಜನರು. ಎರಡೂ ದೇಶಗಳ ಜನರ ಪರಸ್ಪರ ಸಂಪರ್ಕದಿಂದ ನಮ್ಮ ಸಂಬಂಧ ಸುಧಾರಿಸಬಹುದು.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ಒಂದು ದಾರಿಯನ್ನು ನಾವು ಸದಾ ತೆರೆದಿಟ್ಟುಕೊಂಡಿರಬೇಕು’ ಎಂದು ಪಿಟಿಐ ಸಂದರ್ಶನ ವೇಳೆ ಹೊಸಬಾಳೆ ಹೇಳಿದ್ದರು.

‘ಪರಿಶುದ್ಧ ಪ್ರೀತಿ’ಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆ ಪ್ರೀತಿಯು ಎರಡು ಧರ್ಮಗಳ ವ್ಯಕ್ತಿಗಳ ಮಧ್ಯೆಯೇ ಆಗಿರಬಹುದು. ಆದರೆ, ಹಿಂದೂ ಹುಡುಗಿಯರನ್ನು ಪಿತೂರಿಯಿಂದ ಹೊತ್ತೊಯ್ದರೆ, ಅದನ್ನು ಸಹಿಸಲು ಸಾಧ್ಯವಿಲ್ಲ. ಆರ್ಎಸ್ಎಸ್ನ ಸ್ವಯಂ ಸೇವಕರೇ ಬೇರೆ ಬೇರೆ ಜಾತಿ, ಧರ್ಮದವರು, ಅಷ್ಟೇ ಏಕೆ ಬೇರೆ ಬೇರೆ ದೇಶದವರನ್ನು ಮದುವೆಯಾಗಿದ್ದಾರೆ. ಇವರ ಈ ‘ಪರಿಶುದ್ಧ ಪ್ರೀತಿ’ಯನ್ನು ನಾವು ಒಪ್ಪಿಕೊಂಡಿದ್ದೇವೆ’ ಎಂದೂ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.