ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ‘ಮಿತ ವ್ಯಯ’ ಕರೆಗೆ ಓಗೊಟ್ಟು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ತಮ್ಮ ನಿವಾಸದಿಂದ ವಿಧಾನಭವನಕ್ಕೆ ಗುರುವಾರ ಬೈಕ್ನಲ್ಲಿ ಬಂದರು.

ರಾಯಲ್ ಎನ್ಫೀಲ್ಡ್ ಕ್ಲಾಸಿಕ್–350 ಬೈಕನ್ನು ಸ್ವತಃ ಚಾಲನೆ ಮಾಡಿದರು. ಈ ವೇಳೆ ಸಚಿವ ಆಶಿಶ್ ಶೆಲಾರ್ ಜೊತೆಗೆ ಇದ್ದರು.

ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ‘ಮಿತ ವ್ಯಯ’ ಕ್ರಮವನ್ನು ಸಮರ್ಥಿಸಿದರು. ವಿರೋಧ ಪಕ್ಷಗಳು ಈ ವಿಚಾರವಾಗಿ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿವೆ ಎಂದು ಟೀಕಿಸಿದರು.

‘ಪ್ರಧಾನಿ ಮೋದಿ ಅವರ ವಿದೇಶಿ ಭೇಟಿಯು ಕಾರ್ಯತಂತ್ರದ ಮೈತ್ರಿ ಮತ್ತು ಆರ್ಥಿಕ ಅನುಕೂಲದ ಗುರಿಯನ್ನು ಹೊಂದಿದೆ. ಇದನ್ನು ಪ್ರಶ್ನಿಸುವುದು ಮೂರ್ಖತನದ ಪರಮಾವಧಿ’ ಎಂದು ಹರಿಹಾಯ್ದರು.

‘ವಿರೋಧ ಪಕ್ಷಗಳು ಪ್ರಬುದ್ಧವಾಗಿ ವರ್ತಿಸುವ ಅಗತ್ಯವಿದೆ. ಜಗತ್ತಿನಾದ್ಯಂತ ಹಲವು ದೇಶಗಳು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ‘ಸಣ್ಣ ತ್ಯಾಗ’ಕ್ಕೆ ಮನವಿ ಮಾಡಿದ್ದಾರೆ. ಸ್ವತಃ ಪ್ರಧಾನಿ ಕೂಡ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಅನಗತ್ಯವಾಗಿ ವಿವಾದ ಸೃಷ್ಟಿಸುವುದು ಸರಿಯಲ್ಲ’ ಎಂದು ಹೇಳಿದರು.

ಸಂಪುಟ ಸದಸ್ಯರ ಬೆಂಗಾವಲು ವಾಹನಗಳ ಕಡಿತ ಮತ್ತು ಸಚಿವರು, ಅಧಿಕಾರಿಗಳ ಅನಗತ್ಯ ವಿದೇಶಿ ಪ್ರವಾಸವನ್ನು ರದ್ದು ಮಾಡಲು ಸೂಚಿಸಿರುವುದಾಗಿ ಅವರು ತಿಳಿಸಿದರು.

ಪಶ್ಚಿಮ ಏಷ್ಯಾ ಯುದ್ಧದ ಕಾರಣದಿಂದ ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜನರಿಗೆ ಕರೆ ನೀಡಿದ್ದರು.

‘ಪ್ರಚಾರದ ತಂತ್ರ’:

ಫಡಣವೀಸ್ ಅವರ ನಡೆಯು ‘ಪ್ರಚಾರದ ತಂತ್ರ’ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದವು.

‘ಬೈಕ್ನ ಪಿಯುಸಿ ಪ್ರಮಾಣಪತ್ರದ ಅವಧಿ ಮುಗಿದಿದೆ. ಸಾರಿಗೆ ನಿಯಮ ಉಲ್ಲಂಘನೆಗಾಗಿ ಸಾರ್ವಜನಿಕರಿಗೆ ದಂಡ ವಿಧಿಸುವ ಪೊಲೀಸರು ಮುಖ್ಯಮಂತ್ರಿ ಅವರಿಗೂ ದಂಡ ವಿಧಿಸಲಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಹೇಳಿದರು.

‘ಬೈಕ್, ಬಸ್ ಮತ್ತು ಮೆಟ್ರೊ ಮೂಲಕ ಒಂದು ದಿನ ಕ್ಯಾಮೆರಾ ಮುಂದೆ ಪ್ರಯಾಣಿಸಿದರೆ ಬಿಕ್ಕಟ್ಟು ಪರಿಹಾರ ಆಗುವುದಿಲ್ಲ, ಇಂಧನ ದರವೂ ತಗ್ಗುವುದಿಲ್ಲ’ ಎಂದು ಎನ್ಸಿಪಿ (ಎಸ್ಪಿ) ವಕ್ತಾರ ಮಹೇಶ್ ತಾಪ್ಸೆ ಟೀಕಿಸಿದರು.

ಈ ಬಗ್ಗೆ ಪ್ರತಿಯಿಸಿದ ಬಿಜೆಪಿ ವಕ್ತಾರ ನವನಾಥ್ ಬನ್ ಅವರು, ‘ಫಡಣವೀಸ್ ಅವರು ಚಾಲನೆ ಮಾಡಿದ ಬೈಕ್ ಪೊಲೀಸ್ ಇಲಾಖೆಗೆ ಸೇರಿದ್ದು. ಬುಧವಾರವಷ್ಟೇ ಸರ್ವೀಸ್ ಮಾಡಿಸಲಾಗಿದೆ. ಸಾರ್ವಜನಿಕರಿಂದ ಬೆಂಬಲವನ್ನು ಕಳೆದುಕೊಂಡಿರುವ ಕಾಂಗ್ರೆಸ್, ಬೈಕ್ ದಾಖಲೆಗೆ ಸಂಬಂಧಿಸಿದ ತಾಂತ್ರಿಕ ವಿಷಯವನ್ನು ಪ್ರಸ್ತಾಪಿಸಿ ಅಗ್ಗದ ಪ್ರಚಾರ ಪಡೆಯಲು ಯತ್ನಿಸುತ್ತಿದೆ’ ಎಂದು ತಿರುಗೇಟು ನೀಡಿದರು.

C

ಇ–ರಿಕ್ಷಾದಲ್ಲಿ ಪ್ರಯಾಣಿಸಿದ ಅರ್ಜುನ್ ಮೇಘವಾಲ್ ಜೈಪುರ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರೈಲು ನಿಲ್ದಾಣದಿಂದ ರಾಜಸ್ಥಾನದ ಬಿಕಾನೇರ್ನಲ್ಲಿರುವ ತಮ್ಮ ನಿವಾಸಕ್ಕೆ ಇ–ರಿಕ್ಷಾದಲ್ಲಿ ಗುರುವಾರ ಪ್ರಯಾಣಿಸಿದರು. ದೆಹಲಿಯಿಂದ ಬಿಕಾನೇರ್ ರೈಲು ನಿಲ್ದಾಣಕ್ಕೆ ಬಂದಿಳಿದ ಅವರು ಬೆಂಗಾವಲು ವಾಹನದ ಬದಲಾಗಿ ಇ–ರಿಕ್ಷಾ ಮೂಲಕ ನಿವಾಸಕ್ಕೆ ತೆರಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಇಂಧನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ತಿಳಿಸಿದರು. ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರು ಸಹ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮಿತ ಬಳಕೆಗಾಗಿ ಬೆಂಗಾವಲು ವಾಹನಗಳ ಸಂಖ್ಯೆಯನ್ನು ತಗ್ಗಿಸಲು ಮುಖ್ಯ ಕಾರ್ಯದರ್ಶಿ ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳಿಗೂ ಸೂಚಿಸಿದ್ದಾರೆ.

Cut-off box - ಸೈಕಲ್ ಕಾಲ್ನಡಿಗೆ ಮೂಲಕ ಕಚೇರಿಗೆ ಬಂದ ಅಧಿಕಾರಿಗಳು ಲಖನೌ/ಬಾರಾಬಂಕಿ: ಉತ್ತರ ಪ್ರದೇಶದಲ್ಲಿ ಕೆಲವು ಹಿರಿಯ ಅಧಿಕಾರಿಗಳು ಪರಿಸರಸ್ನೇಹಿ ಸಂಚಾರವನ್ನು ಉತ್ತೇಜಿಸುವ ಉದ್ದೇಶದಿಂದ ಸೈಕಲ್ ಮತ್ತು ಕಾಲ್ನಡಿಗೆ ಮೂಲಕ ಗುರುವಾರ ಕಚೇರಿ ತಲುಪಿದರು. ಸಂಜೀವ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ರಾಧಾಕೃಷ್ಣನ್ ಧೀಮನ್ ಅವರು ತಮ್ಮ ನಿವಾಸದಿಂದ ಸಂಸ್ಥೆಗೆ ಸೈಕಲ್ ಮೂಲಕ ಬಂದರು. ಕ್ಯಾಂಪಸ್ ಒಳಗೆ ಮತ್ತು ಸುತ್ತಮುತ್ತ ಇರುವ ಸಂಸ್ಥೆಯ ಉದ್ಯೋಗಿಗಳು ವಿದ್ಯಾರ್ಥಿಗಳು ಕಾಲ್ನಡಿಗೆ ಅಥವಾ ಸೈಕಲ್ ಮೂಲಕ ಹಾಜರಾಗಿದ್ದರು. ಬಾರಾಬಂಕಿ ಜಿಲ್ಲಾಧಿಕಾರಿ ಇಶಾನ್ ಪ್ರತಾಪ್ ಸಿಂಗ್ ಅವರು ತಮ್ಮ ನಿವಾಸದಿಂದ ನಡೆದೇ ಕಚೇರಿಗೆ ಹಾಜರಾದರು. ಇವರೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಕಾರ್ ಸಿಂಗ್ ಅವರು ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.