ಫಾಲ್ಟಾ: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿಶೇಷ ಪ್ಯಾಕೇಜ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿಯುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಜಹಾಂಗೀರ್ ಖಾನ್ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಹಾಂಗೀರ್, ಫಾಲ್ಟಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಫಾಲ್ಟಾ ಕ್ಷೇತ್ರದ ಜನರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಾನು ಫಾಲ್ಟಾದ ಪುತ್ರನಾಗಿದ್ದು, ಈ ಪ್ರದೇಶವು ಶಾಂತಿಯಿಂದ ಇರಬೇಕು ಮತ್ತು ಅಭಿವೃದ್ಧಿ ಸಾಧಿಸಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

ಜಹಾಂಗೀರ್ ಖಾನ್ ಅವರು ಫಾಲ್ಟಾ ಮರು ಮತದಾನದಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಅದರ ಹಿಂದಿನ ಸರಿಯಾದ ಕಾರಣ ತಿಳಿದು ಬಂದಿಲ್ಲ ಎಂದು ಟಿಎಂಸಿ ವಕ್ತಾರ ಅರೂಪ್ ಚಕ್ರವರ್ತಿ ತಿಳಿಸಿದ್ದಾರೆ.

ಮತ್ತೊಂದೆಡೆ ಮತಗಟ್ಟೆ ಏಜೆಂಟ್ ಸಿಗದ ಹಿನ್ನೆಲೆಯಲ್ಲಿ ಟಿಎಂಸಿ ಅಭ್ಯರ್ಥಿ ಪಲಾಯನಗೈದಿದ್ದಾರೆ ಎಂದು ಸುವೇಂದು ಅಧಿಕಾರಿ ಟೀಕಿಸಿದ್ದಾರೆ.

'ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 29ರಂದು ನಡೆದ ಮತದಾನದ ವೇಳೆ ಹಲವಾರು ಚುನಾವಣಾ ಅಪರಾಧಗಳು ನಡೆದಿವೆ' ಎಂಬ ಕಾರಣ ನೀಡಿ ಚುನಾವಣಾ ಆಯೋಗವು ಈ ಕ್ಷೇತ್ರದಲ್ಲಿ ಮೇ 21ರಂದು ಹೊಸದಾಗಿ ಮತದಾನಕ್ಕೆ ಆದೇಶಿಸಿದೆ. ಈ ಕ್ಷೇತ್ರದ ಮತ ಎಣಿಕೆ ಮೇ 24ರಂದು ನಡೆಯಲಿದೆ.
.ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಆಪ್ತನ ಹತ್ಯೆ: ಪ್ರಮುಖ ಆರೋಪಿ ಬಂಧನ.ಪಶ್ಚಿಮ ಬಂಗಾಳ | ಚುನಾವಣೋತ್ತರ ಹಿಂಸಾಚಾರ: 181 ಹೊಸ ಎಫ್ಐಆರ್ ದಾಖಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.