ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿ ಪಡೆಯುವ ಹೋರಾಟದಲ್ಲಿ ‘ಇಂಡಿಯಾ’ ಮೈತ್ರಿಕೂಟ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡುತ್ತಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈತ್ರಿಕೂಟದ ನಡೆಗಳ ಕುರಿತು ಮುಕ್ತವಾಗಿ ಮಾತನಾಡಿದ ಅವರು, ‘ನಮ್ಮ ಪಕ್ಷ ಮೈತ್ರಿಕೂಟದ ಬದ್ಧ ಸದಸ್ಯನಾಗಿದ್ದರೂ, ಒಕ್ಕೂಟವು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳ ಬಗ್ಗೆ ಮೈತ್ರಿಕೂಟದಲ್ಲಿ ಏಕೀಕೃತ ಮತ್ತು ಗಟ್ಟಿ ಧ್ವನಿ ಕೇಳಿಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಮೈತ್ರಿಕೂಟದ ಬಗ್ಗೆ ನಮಗಿರುವ ದೊಡ್ಡ ಆಕ್ಷೇಪವೇ ಇದು. ಅವರು ನಮ್ಮ ಪರವಾಗಿ ಪ್ರಬಲವಾಗಿ ಹೋರಾಡುತ್ತಾರೆ ಎಂಬ ಭರವಸೆ ನಮಗಿತ್ತು. ಆದರೆ ಹಾಗೆ ಆಗುತ್ತಿಲ್ಲ. ಪ್ರಮುಖ ಪಕ್ಷವಾದ ಕಾಂಗ್ರೆಸ್ ನಾವು ಅಂದುಕೊಂಡ ಹಾಗೇ ಪಾತ್ರವನ್ನು ನಿರ್ವಹಿಸುತ್ತಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ’ ಎಂದು ಅಬ್ದುಲ್ಲಾ ಹೇಳಿದರು.

‘ನಾವು ಬಿಜೆಪಿಯ ಭಾಗವಲ್ಲ ಮತ್ತು ಎಂದಿಗೂ ಆಗುವುದಿಲ್ಲ. ನಾವು ಇಂಡಿಯಾ ಮೈತ್ರಿಕೂಟದ ಜೊತೆಗಿದ್ದೇವೆ. ಚುನಾವಣೆ ಮುಗಿದ ನಂತರವಾದರೂ ಒಕ್ಕೂಟವು ಮತ್ತೆ ಒಗ್ಗೂಡಿ ರಾಷ್ಟ್ರೀಯ ಸಮಸ್ಯೆಗಳ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನದ ಪರವಾಗಿ ಬಲವಾಗಿ ಧ್ವನಿ ಎತ್ತಲಿದೆ ಎಂದು ಆಶಿಸುತ್ತೇನೆ’ ಎಂದರು.

‘ಮೈತ್ರಿಕೂಟವು ಕೇವಲ ಚುನಾವಣಾ ಮೈತ್ರಿಯಾಗಿ ಉಳಿಯಬಾರದು ಎಂದು ಎಚ್ಚರಿಸಿದ ಅಬ್ದುಲ್ಲಾ, ‘ಇಂದಿನ ರಾಜಕೀಯ 50 ವರ್ಷಗಳ ಹಿಂದಿನಂತಿಲ್ಲ. ಇಂದು ನಮ್ಮ ಮುಂದೆ ಗಾಂಧಿ, ನೆಹರೂ ಅಥವಾ ಇಂದಿರಾ ಗಾಂಧಿಯಂತಹ ನಾಯಕರಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಬಲ್ಲ ಒಬ್ಬ ಸಮರ್ಥ ನಾಯಕನನ್ನು ಬಿಂಬಿಸಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಿಲ್ಲ. ನಾಯಕರು ಎಸಿ ಕಚೇರಿಗಳಿಂದ ಹೊರಬರಬೇಕು. ಸಾಮಾನ್ಯ ಜನರಂತೆ ಬಿಸಿಲು ಮತ್ತು ಧೂಳನ್ನು ಎದುರಿಸುತ್ತಾ ಜನರೊಂದಿಗೆ ನೇರ ಸಂಪರ್ಕ ಸಾಧಿಸಬೇಕು. ಜನರ ಬಳಿಗೆ ಹೋದರೆ ಮಾತ್ರ ಗಟ್ಟಿಯಾದ ಹೋರಾಟ ರೂಪಿಸಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.