ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಶಃ ದೋಷಾರೋಪ ಪಟ್ಟಿ ಸಲ್ಲಿಕೆ ಸಂವಿಧಾನದ 21ನೇ ವಿಧಿಗೆ ವಿರುದ್ಧ: ದೆಹಲಿ ಹೈಕೋರ್ಟ್‌

Published 20 ಮೇ 2023, 13:18 IST
Last Updated 20 ಮೇ 2023, 13:18 IST
ಅಕ್ಷರ ಗಾತ್ರ

ನವದೆಹಲಿ: 'ತನಿಖೆಯ ಯಾವುದೋ ಒಂದು ಅಂಶವನ್ನು ಉಲ್ಲೇಖಿಸಿ, ಭಾಗಶಃ ದೋಷಾರೋಪ ಪಟ್ಟಿ ಸಲ್ಲಿಸುವುದು ಸಂವಿಧಾನದ 21ನೇ ವಿಧಿಗೆ ವಿರುದ್ಧವಾಗಿದ್ದು, ‘ಡಿಫಾಲ್ಟ್‌ ಜಾಮೀನು’ ಪಡೆಯಲು ಆರೋಪಿಯು ಹೊಂದಿರುವ ಹಕ್ಕನ್ನು ಕಸಿಯುತ್ತದೆ' ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಭ್ರಷ್ಟಾಚಾರ ಆರೋಪದಡಿ ಸಿಬಿಐನಿಂದ ಬಂಧಿತರಾಗಿರುವ ಅವಿನಾಶ್‌ ಜೈನ್ ಎಂಬುವವರಿಗೆ ‘ಡಿಫಾಲ್ಟ್‌ ಜಾಮೀನು’ ನೀಡಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಅಮಿತ್‌ ಶರ್ಮಾ ಈ ಮಾತು ಹೇಳಿದರು.

ಪ್ರಾಸಿಕ್ಯೂಷನ್ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ, ಆರೋಪಿಯು ಕಾನೂನುಬದ್ಧವಾಗಿ ತಂತಾನೆ ಪಡೆಯಬಹುದಾದ ಜಾಮೀನಿಗೆ ‘ಡಿಫಾಲ್ಟ್‌ ಜಾಮೀನು’ ಎನ್ನಲಾಗುತ್ತದೆ.

‘ಆರೋಪಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಸಿಬಿಐ, ತನಿಖೆಯನ್ನೇ ಪೂರ್ಣಗೊಳಿಸಿಲ್ಲ. ಆದರೂ, ಅದು ದೋಷಾರೋಪ ಪಟ್ಟಿ ಸಲ್ಲಿಸಲು ಮುಂದಾಗಿದೆ’ ಎಂದು ಹೈಕೋರ್ಟ್‌ ಹೇಳಿದೆ.

ಆರೋಪಿ ಪರ ಹಿರಿಯ ವಕೀಲ ವಿಕಾಸ್‌ ಪಾಹ್ವಾ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT