ತಿರುವನಂತಪುರ: ಕೇರಳದ ಕರಾವಳಿಯಲ್ಲಿ ಮುಳುಗಿರುವ ಲೈಬೀರಿಯಾದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲದ ಕಂಟೇನರ್ಗಳು ತೀರಕ್ಕೆ ತೇಲಿಬಂದಿದ್ದು, ಅವುಗಳನ್ನು ತೆರವುಗೊಳಿಸುವಾಗ ಬೆಂಕಿ ಹೊತ್ತಿಕೊಂಡಿರುವುದು ಕೊಲ್ಲಂನಲ್ಲಿ ಭೀತಿಯನ್ನು ಹೆಚ್ಚಿಸಿದೆ.

ಕೊಲ್ಲಂನ ಉಪನಗರ ಶಕ್ತಿಕುಳಂಗರದ ಕರಾವಳಿಯ ತೀರಕ್ಕೆ ಬಂದಿರುವ ಕಂಟೇನರ್ಗಳನ್ನು ತೆರವುಗೊಳಿಸುವಾಗ ಒಂದು ಕಂಟೈನರ್ನಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು. ಪ್ರಾಥಮಿಕ ವರದಿಗಳ ಪ್ರಕಾರ, ವಿದ್ಯುತ್ ಕಟರ್ಗಳಿಂದ ಕಂಟೇನರ್ ಕತ್ತರಿಸುವಾಗ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡು, ದಟ್ಟ ಹೊಗೆ ಆವರಿಸಿತು. ಸ್ಥಳದಲ್ಲಿ ಬೀಡುಬಿಟ್ಟಿರುವ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದರು.

ಈ ನಡುವೆ ಕೇರಳ ಸರ್ಕಾರವು, ಲೈಬೀರಿಯಾದ ತೈಲ ಹಡಗು ಮುಳುಗಿರುವ ಘಟನೆಯನ್ನು ‘ನಿರ್ದಿಷ್ಟ ವಿಪತ್ತು’ ಎಂದು ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.