ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಅಬ್ದುಲ್ ಹಕ್ ಖಾನ್ ಅವರು ಎರಡು ವರ್ಷದ ಬಳಿಕ ಮತ್ತೆ ಪಿಡಿಪಿಗೆ ಸೇರ್ಪಡೆಯಾದರು.
ಪಿಡಿಪಿ–ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು ಮತ್ತು ನ್ಯಾಯ ಸಚಿವರಾಗಿದ್ದ ಖಾನ್, 2018ರಲ್ಲಿ ಸರ್ಕಾರ ಪತನಗೊಂಡ ಬಳಿಕ ಪಿಡಿಪಿಯಿಂದ ದೂರವಾಗಿದ್ದರು.
ಯೋಗಕ್ಷೇಮ ವಿಚಾರಿಸಲಿಕ್ಕಾಗಿ ತಮ್ಮ ನಿವಾಸಕ್ಕೆ ಬಂದಿದ್ದ ಪಿಡಿಪಿ ಮುಖ್ಯಸ್ಥರಾದ ಮೆಹಬೂಬಾ ಮುಫ್ತಿ ಸಮ್ಮುಖದಲ್ಲಿ ಅಬ್ದುಲ್ ಮರುಸೇರ್ಪಡೆಗೊಂಡರು ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.