ಮುಂಬೈ: ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ (87) ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದು, ಇಲ್ಲಿನ ಚಂದನವಾಡಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಿತು.

ವಿಜಯಪತ್ ಸಿಂಘಾನಿಯಾ ಮಗನಾದ ಗೌತಮ್ ಸಿಂಘಾನಿಯಾ ಅಂತಿಮ ಸಂಸ್ಕಾರದ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಪತ್ ಸಿಂಘಾನಿಯಾ ಅವರನ್ನು ಇತ್ತೀಚಿನ ತಿಂಗಳುಗಳಲ್ಲಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು ಎಂದು ಗೌತಮ್ ಸಿಂಘಾನಿಯಾ ಪತ್ನಿ ನವಾಜ್ ಮೋದಿ ಹೇಳಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮೃತರ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ.

1980ರಿಂದ ಎರಡು ದಶಕಗಳ ಕಾಲ ರೇಮಂಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿಜಯಪತ್ ಸಿಂಘಾನಿಯಾ ಅವರು, ಸಮೂಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಜವಳಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದರು. 2000ನೇ ಇಸವಿಯಲ್ಲಿ ಗೌತಮ್ ಸಿಂಘಾನಿಯಾಗೆ ಸಮೂಹದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು.

ತಂದೆ ಮತ್ತು ಮಗನ ನಡುವೆ ಕೆಲವು ವಿವಾದಗಳು ಉಂಟಾಗಿದ್ದವು. ಬಳಿಕ ಅವು ಇತ್ಯರ್ಥವಾಗಿವೆ ಎನ್ನಲಾಗಿದೆ.
.ರಾಜಿ ಆಗಲ್ಲ; ಜೆಕೆ ಹೌಸ್ಗೆ ಮತ್ತೆ ಕಾಲಿಡಲ್ಲ- ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ .ಸಿಂಘಾನಿಯಾ ಆತ್ಮಚರಿತ್ರೆ ಬಿಡುಗಡೆಗೆ ತಡೆ.ಕುರುಡಾಗಿ ಮಕ್ಕಳನ್ನು ಪ್ರೀತಿಸಬೇಡಿ: ರೇಮಂಡ್ ಕಂಪನಿ ಮಾಜಿ ಮುಖ್ಯಸ್ಥ ವಿಜಯ್ಪತ್ ಸಿಂಘಾನಿಯಾ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.