ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಮಹಾರಾಷ್ಟ್ರ, ಒಡಿಶಾ, ಬಿಹಾರದ ನಾಲ್ವರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮೊಸೈಬ್ ಅಹ್ಮದ್, ಮೊಹಮ್ಮದ್ ಹಮ್ಮದ್, ಮೊಹಮ್ಮದ್ ಸೊಹೈಲ್ ಮತ್ತು ಶೇಖ್ ಇಮ್ರಾನ್ ಬಂಧಿತರು. ಆರೋಪಿಗಳಿಂದ ಕಚ್ಚಾಬಾಂಬ್ ಹಾಗೂ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ಆರೋಪಿಗಳು ಪ್ರಸಿದ್ಧ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಲು ಸ್ಥಳ ಪರಿಶೀಲನೆ ನಡೆಸಿದ್ದರು. ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಕೆಲವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದರು. ಇವರ ಪೈಕಿ ಇಬ್ಬರು ಜನದಟ್ಟಣೆಯ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲು, ರಿಮೋಟ್ ನಿಯಂತ್ರಿತ ಆಟಿಕೆಯ ಕಾರಿಗೆ ಕಚ್ಚಾಬಾಂಬ್ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ಜಾಲದಲ್ಲಿ ಭಾಗಿಯಾಗಿರುವ ಇತರರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಖಲೀಫತ್ ಸ್ಥಾಪನೆ ಹಾಗೂ ಜನರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಸೆಳೆಯಲು ‘ಖುರಾಸಾನ್ನ ಲಷ್ಕರ್’ ಎಂಬ ಪರಿಕಲ್ಪನೆಯಿಂದ ಪ್ರೇರೇಪಿತರಾಗಿದ್ದರು. ಅಲ್ಲದೆ, ‘ಘಜ್ವಾ–ಎ–ಹಿಂದ್’ನಂತಹ ಪರಿಕಲ್ಪನೆಯ ಪ್ರಚಾರದಲ್ಲಿ ತೊಡಗಿದ್ದರು’ ಎಂದು ತಿಳಿಸಿದ್ದಾರೆ.

‘ಎನ್ಕ್ರಿಪ್ಟ್ ಮಾಡಿದ ಸಾಮಾಜಿಕ ಮಾಧ್ಯಮದ ಗುಂಪುಗಳಲ್ಲಿ ಆರೋಪಿಗಳು ಸಕ್ರಿಯರಾಗಿದ್ದರು. ಅಲ್ಲಿ ಜಿಹಾದ್, ಉಗ್ರಗಾಮಿ ಸಿದ್ಧಾಂತ ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಈ ವೇದಿಕೆಗಳನ್ನು ಹೊಸ ಸದಸ್ಯರನ್ನು ಗುರುತಿಸಲು, ಉಪದೇಶ ನೀಡಲು ಮತ್ತು ನೇಮಕ ಮಾಡಿಕೊಳ್ಳಲು ಬಳಸಲಾಗುತ್ತಿತ್ತು’ ಎಂದು ಹೇಳಿದ್ದಾರೆ.

‘ಮೊಸೈಬ್ ಅಹ್ಮದ್ ಉತ್ತರ ಪ್ರದೇಶದ ಅಜಮ್ಗಢದವನಾಗಿದ್ದು, 10ನೇ ತರಗತಿಯವರೆಗೆ ಓದಿದ್ದಾನೆ. ಸೌದಿ ಅರೇಬಿಯಾ, ಕತಾರ್ನಲ್ಲಿ ವೆಲ್ಡರ್, ಆಟೊ ಮೆಕ್ಯಾನಿಕ್ ಮತ್ತು ಆಟೊ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿದ್ದ. ಆತ ಸದ್ಯ, ಠಾಣೆಯಲ್ಲಿರುವ ಖಾಸಗಿ ಆಟೊಮೊಬೈಲ್ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಕಚ್ಚಾಬಾಂಬ್ ಅಳವಡಿಸಿದ ರಿಮೋಟ್ ನಿಯಂತ್ರಿತ ಕಾರನ್ನು ವಿನ್ಯಾಸಗೊಳಿಸಲು ತನ್ನ ತಾಂತ್ರಿಕ ಕೌಶಲವನ್ನು ಬಳಸುತ್ತಿದ್ದ. ಈ ಮೂಲಕ ಜನದಟ್ಟಣೆ ಪ್ರದೇಶಗಳಲ್ಲಿ ದಾಳಿ ನಡೆಸಲು ಯೋಜಿಸಿದ್ದರು’ ಎಂದು ತಿಳಿಸಿದ್ದಾರೆ.

‘ಮೊಹಮ್ಮದ್ ಹಮ್ಮದ್ ಮುಂಬೈ ನಿವಾಸಿಯಾಗಿದ್ದು, ದೂರಶಿಕ್ಷಣದ ಮೂಲಕ 12ನೇ ತರಗತಿ ಓದುತ್ತಿದ್ದಾನೆ. ಈತ ಭಯೋತ್ಪಾದಕರ ಗುಂಪಿಗೆ ಸೇರಿಕೊಂಡಿದ್ದ. ಶೇಖ್ ಇಮ್ರಾನ್ ಒಡಿಶಾದ ಭುವನೇಶ್ವರದವನಾಗಿದ್ದು, 10ನೇ ತರಗತಿ ಓದಿದ್ದಾನೆ. ಸೆಕ್ಯುರಿಟಿ ಗಾರ್ಡ್ ಮತ್ತು ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದ. 2024ರಲ್ಲಿ ಈತ ತಾರೀಕ್ ಜಮೀಲ್, ಇಸ್ರಾರ್ ಅಹ್ಮದ್, ಜಾಕಿರ್ ನಾಯಕ್ ಮುಂತಾದವರ ಉಪನ್ಯಾಸಗಳನ್ನು ಕೇಳಲು ಪ್ರಾರಂಭಿಸಿದ್ದ. ಕ್ರಮೇಣ ಮೂಲಭೂತವಾದಿ ನಂಬಿಕೆಗಳನ್ನು ಬೆಳೆಸಿಕೊಂಡಿದ್ದ. ಸಾಮಾಜಿಕ ಮಾಧ್ಯಮಗಳ ಮೂಲಕ ಮೊಹಮ್ಮದ್ ಹಮ್ಮದ್, ಮೊಸೈಬ್ ಅಹ್ಮದ್ ಅವರನ್ನು ಭೇಟಿಯಾಗಿದ್ದ. 2025ರ ಡಿಸೆಂಬರ್ನಲ್ಲಿ ಕೆಂಪು ಕೋಟೆ ಮತ್ತು ಇಂಡಿಯಾ ಗೇಟ್ ವೀಕ್ಷಣೆಗಾಗಿ ದೆಹಲಿಗೆ ಭೇಟಿ ನೀಡಿದ್ದ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ಮೊಹಮ್ಮದ್ ಸೊಹೈಲ್ ಬಿಹಾರದ ಕತಿಹಾರ್ ನಿವಾಸಿ. 10ನೇ ತರಗತಿವರೆಗೆ ಓದಿರುವ ಈತ ವೃತ್ತಿಯಲ್ಲಿ ಪ್ಲಂಬರ್. ಇಸ್ರಾರ್ ಅಹ್ಮದ್ ಅವರ ಭಾಷಣಗಳಿಂದ ಪ್ರಭಾವಿತನಾಗಿದ್ದ. ಕಳೆದ ಮಾರ್ಚ್ನಲ್ಲಿ ‘ಘಜ್ವಾ–ಎ–ಹಿಂದ್’ಗಾಗಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಂಗ್ರಹಿಸಲು ಯುವಕರನ್ನು ಪ್ರಚೋದಿಸಿದ್ದ. ಜಿಹಾದ್ ಹೆಸರಿನಲ್ಲಿ ಹಣ ಸಂಗ್ರಹಿಸಲು ತನ್ನ ಬ್ಯಾಂಕ್ ಖಾತೆ, ಕ್ಯೂಆರ್ ಕೋಡ್ ಹಂಚಿಕೊಂಡಿದ್ದ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ರಾಮಮಂದಿರದ ಮೇಲೆ ದಾಳಿ ನಡೆಸಲು ಚರ್ಚೆ’

‘ಆರೋಪಿಗಳ ಪೈಕಿ ಒಬ್ಬ 2025ರ ಡಿಸೆಂಬರ್ನಲ್ಲಿ ದೆಹಲಿಯ ಕೆಂಪು ಕೋಟೆ ಹಾಗೂ ಇಂಡಿಯಾ ಗೇಟ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದ. ಅಲ್ಲದೆ ಸಂಸತ್ ಭವನ ಸೇನೆಗೆ ಸೇರಿದ ಸಂಸ್ಥೆಗಳು ಹಾಗೂ ಅಯೋಧ್ಯೆಯ ರಾಮಮಂದಿರ ಸೇರಿದಂತೆ ಪ್ರಸಿದ್ಧ ಸ್ಥಳಗಳ ಮೇಲೆ ದಾಳಿ ನಡೆಸಲು ಚರ್ಚೆ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.