ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ | ಕಾರ್ಮಿಕರ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ

Published 14 ಮೇ 2023, 13:32 IST
Last Updated 14 ಮೇ 2023, 13:32 IST
ಅಕ್ಷರ ಗಾತ್ರ

ಲಖನೌ : ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಹಾಗೂ ಕಾರ್ಮಿಕರ ಮಕ್ಕಳಿಗಾಗಿಯೇ ಉತ್ತರ ಪ್ರದೇಶದ ಕಾರ್ಮಿಕ ಸಚಿವಾಲಯವು ಉಚಿತ ಶಿಕ್ಷಣ ನೀಡಲು ಮುಂದಾಗಿದ್ದು, 6ರಿಂದ 12ನೇ ತರಗತಿವರೆಗೆ ಕಲಿಕೆಗಾಗಿ ’ಅಟಲ್‌‘ ವಸತಿಯುತ ಶಾಲೆಗಳನ್ನು ತೆರೆಯಲಿದೆ.

‘ಈ ಶಾಲೆಯಲ್ಲಿ ಮಕ್ಕಳಿಗೆ ವಸತಿ ಸೌಲಭ್ಯವನ್ನೂ ನೀಡಲಾಗುತ್ತದೆ. ಶಾಲೆಯಲ್ಲಿ ದಾಖಲಾಗಲು ಮಕ್ಕಳು ಪ್ರವೇಶ ಪರೀಕ್ಷೆ ಬರೆಯಬೇಕು. ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಇಂತಹ ತಲಾ 18 ಶಾಲೆಯನ್ನು ತೆರೆಯಲಾಗಿದೆ. ಜುಲೈ 6ರಿಂದ ತರಗತಿಗಳು ಪ್ರಾರಂಭಗೊಳ್ಳಲಿವೆ’ ಎಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವ ಅನಿಲ್‌ ರಾಜ್‌ಭರ್‌ ತಿಳಿಸಿದರು.

‘ಕನಿಷ್ಠ ಮೂರು ವರ್ಷದ ಇ–ಶ್ರಮಿಕ್‌ ಕಾರ್ಡ್‌ಅನ್ನು ಪೋಷಕರು ಹೊಂದಿರಬೇಕು. ಜೊತೆಗೆ ಉತ್ತರ ಪ್ರದೇಶ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಅಭಿವೃದ್ಧಿ ಮಂಡಳಿಯಲ್ಲಿ ನೋಂದಣಿಯಾಗಿರಬೇಕು. ಕೋವಿಡ್‌ನಿಂದ ಒಬ್ಬ ಪೋಷಕರನ್ನು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಈ ಶಾಲೆಯಲ್ಲಿ ಕಲಿಯಲು ಅರ್ಹರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT