ಇಂಧನ ಮೇಲಿನ ಅಬಕಾರಿ ಸುಂಕದಲ್ಲಿ ಮಾಡಿರುವ ಕಡಿತದಿಂದ ಗ್ರಾಹಕರಿಗೆ ಇವುಗಳ ದರದಲ್ಲಿ ಆಗುವ ಹೆಚ್ಚಳದಿಂದ ರಕ್ಷಣೆ ಸಿಗಲಿದೆ. ಅಗತ್ಯ ವಸ್ತುಗಳ ಪೂರೈಕೆ ಮತ್ತು ಬೇಡಿಕೆಯಲ್ಲಾಗುವ ಏರಿಳಿತದ ಬಿಸಿ ಜನರಿಗೆ ತಟ್ಟದಂತೆ ಸರ್ಕಾರ ಕ್ರಮಗೊಳ್ಳುತ್ತಿದೆ
– ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ
ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡುವುದು ಇಲ್ಲವೇ ಹಣಕಾಸು ಹೊರೆ ಹೊರಬೇಕು ಎಂಬ ಎರಡೇ ಆಯ್ಕೆಗಳು ಸರ್ಕಾರದ ಮುಂದಿದ್ದವು. ದೇಶದ ಜನರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಹಣಕಾಸು ಹೊರೆ ಹೊರುವುದಕ್ಕೆ ಸರ್ಕಾರ ನಿರ್ಧರಿಸಿದೆ
– ಹರದೀಪ್ ಸಿಂಗ್ ಪುರಿ, ಕೇಂದ್ರ ಪೆಟ್ರೋಲಿಯಂ ಸಚಿವ
ಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದಲೂ ಕಚ್ಚಾ ತೈಲ ಖರೀದಿಸಿದೆ. ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಈ ವ್ಯವಹಾರದಿಂದ ಅಂಬಾನಿ ಮಾತ್ರ ಶ್ರೀಮಂತರಾಗಿದ್ದಾರೆ