ನವದೆಹಲಿ: ಇಂದಿನಿಂದ (ಮೇ 20) ದೆಹಲಿಯಲ್ಲಿರುವ ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವವರು ಮಹಾತ್ಮ ಗಾಂಧೀಜಿಯವರ ಕೃತಕ ಬುದ್ಧಿಮತ್ತೆ ಚಾಲಿತ ಹೈಪರ್ ರಿಯಲಿಸ್ಟಿಕ್ 3ಡಿ ಅವತಾರದೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಇದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಾಪು ಅವರ ಸ್ಫೂರ್ತಿಯನ್ನು ಜೀವಂತಗೊಳಿಸುತ್ತದೆ ಎಂದು ವರದಿ ತಿಳಿಸಿದೆ.

ಎಐ ಚಾಲಿತ ಸಂವಾದಾತ್ಮಕ ‘ಹೋಲೊಬಾಕ್ಸ್’ ಸ್ಥಾಪನೆಯನ್ನು ಬುಧವಾರ ಆರಂಭಿಸಲಾಗುವುದು ಎಂದು ಸಂಗ್ರಹಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವರ್ಧಿತ ಸಂವಹನ ಮತ್ತು ಸಂದರ್ಶಕರ ತೃಪ್ತಿಗಾಗಿ, ವಸ್ತು ಸಂಗ್ರಹಾಲಯವು ತಂತ್ರಜ್ಞಾನದ ಬಳಕೆಯನ್ನು ಬಲಪಡಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಸ್ತು ಸಂಗ್ರಹಾಲಯವು ಮೇ 20 ರಂದು ತನ್ನ ಮೂರನೇ ಎಐ ಚಾಲಿತ ಸಂವಾದಾತ್ಮಕ ಹೋಲೊಬಾಕ್ಸ್ ಅನ್ನು ಆರಂಭಿಸುತ್ತಿದೆ. ಇದು ಸಂದರ್ಶಕರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರೊಂದಿಗೆ ಜೀವಂತ ವ್ಯಕ್ತಿ ಜೊತೆ ಮಾತನಾಡಿದಂತೆ ಸಂವಾದಾತ್ಮಕ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಎಐ ಚಾಲಿತ ಹೋಲೊಬಾಕ್ಸ್ ಸ್ಥಾಪನೆ ಮಾಡಲಾಗಿತ್ತು. ಭವಿಷ್ಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಇದೇ ರೀತಿಯ ಹೋಲೊಬಾಕ್ಸ್ ಸ್ಥಾಪನೆ ಮಾಡಲು ಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

‘ಇಂತಹ ಉಪಕ್ರಮಗಳು ಭಾರತದ ರಾಜಕೀಯ ಮತ್ತು ಪ್ರಜಾಪ್ರಭುತ್ವ ಪರಂಪರೆಯನ್ನು ಸಮಗ್ರವಾಗಿ ಪ್ರಸ್ತುತಪಡಿಸುವಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯದ ಬದ್ಧತೆಯನ್ನು ಬಲಪಡಿಸುತ್ತವೆ’ಎಂದು ನಿರ್ದೇಶಕಿ ಅಶ್ವನಿ ಲೋಹಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.