ಲಖನೌ: ಉತ್ತರ ಪ್ರದೇಶದಲ್ಲಿ 594 ಕಿ.ಮೀ. ಉದ್ದದ ಗಂಗಾ ಎಕ್ಸ್ಪ್ರೆಸ್ವೇ ಅನ್ನು ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇದು ದೇಶದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಗಂಗಾ ಎಕ್ಸ್ ಪ್ರೆಸ್ವೇ 594 ಕಿ.ಮೀ. ಉದ್ದದ, 6 ಪಥಗಳ (ಎಂಟಕ್ಕೆ ವಿಸ್ತರಿಸಬಹುದಾದ), ಪ್ರವೇಶ-ನಿಯಂತ್ರಿತ ಹೈಸ್ಪೀಡ್ ಕಾರಿಡಾರ್ ಆಗಿದ್ದು, ಒಟ್ಟು ಸುಮಾರು ₹36,230 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಹೈ-ಸ್ಪೀಡ್ ಕಾರಿಡಾರ್, ಮೀರಠ್ನಿಂದ ಪ್ರಯಾಗರಾಜ್ಗೆ ಸಂಪರ್ಕ ಕಲ್ಪಿಸುತ್ತದೆ. ಆ ಮೂಲಕ ಕೈಗಾರಿಕಾ ಹೂಡಿಕೆ, ಲಾಜಿಸ್ಟಿಕ್ಸ್, ಕೃಷಿ ಮಾರುಕಟ್ಟೆ ಮತ್ತು ಪ್ರಾದೇಶಿಕ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.

ಗಂಗಾ ಎಕ್ಸ್ಪ್ರೆಸ್ವೇ ಉದ್ಘಾಟನೆಯೊಂದಿಗೆ ರಾಜ್ಯದ ಅಭಿವೃದ್ಧಿಯು ವೇಗ ಪಡೆದುಕೊಳ್ಳಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆರು ಪಥಗಳ ಎಕ್ಸ್ಪ್ರೆಸ್ವೇ, ಗ್ರಾಮಗಳು, ರೈತರು, ಉದ್ಯಮಿಗಳು ಮತ್ತು ಯುವಕರನ್ನು ಸಂಪರ್ಕಿಸುವ 'ಜೀವನಪಥ' ಎಂದು ಅವರು ಬಣ್ಣಿಸಿದ್ದಾರೆ.

ಗಂಗಾ ಎಕ್ಸ್ಪ್ರೆಸ್ವೇ ವಿಶೇಷತೆಗಳು:

ಗಂಗಾ ಎಕ್ಸ್ಪ್ರೆಸ್ವೇ 12 ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಮೀರಠ್, ಹಾಪುರ್, ಬುಲಂದ್ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್ಪುರ, ಹರ್ದೋಯಿ, ಉನ್ನಾವೋ, ರಾಯ್ಬರೇಲಿ, ಪ್ರತಾಪ್ಗಢ ಮತ್ತು ಪ್ರಯಾಗರಾಜ್. ಅಲ್ಲದೆ ಪ್ರಮಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಆ ಮೂಲಕ ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ಪೂರ್ವ ಪ್ರದೇಶಗಳನ್ನು ಅಡೆ-ತಡೆರಹಿತ ಹೈಸ್ಪೀಡ್ ಕಾರಿಡಾರ್ ಮೂಲಕ ಸಂಪರ್ಕಿಸುತ್ತದೆ.

ಗಂಟೆಗೆ 120 ಕಿ.ಮೀ. ವೇಗ...

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯನ್ನು ಆರು ಪಥಗಳ ಎಕ್ಸ್ಪ್ರೆಸ್ವೇಯಾಗಿ ನಿರ್ಮಿಸಲಾಗಿದೆ. ಅಲ್ಲದೆ ಎಂಟು ಪಥಗಳಿಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಗಂಟೆಗೆ ಗರಿಷ್ಠ 120 ಕಿ.ಮೀ. ವೇಗದಲ್ಲಿ ಚಲಿಸಬಹುದಾಗಿದೆ. ಈ ಯೋಜನೆಯು ಮೀರಠ್ ಮತ್ತು ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 10-12 ಗಂಟೆಗಳಿಂದ ಸುಮಾರು 6 ಗಂಟೆಗಳಿಗೆ ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.

ದೇಶದ ಮೊದಲ ಎಕ್ಸ್ಪ್ರೆಸ್ವೇ ಏರ್ಸ್ಟ್ರಿಪ್...

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ತುರ್ತು ಭೂಸ್ಪರ್ಶಕ್ಕಾಗಿ ಶಹಜಹಾನ್ಪುರ ಬಳಿ 3.2 ಕಿಮೀ ಉದ್ದದ ದೇಶದ ಮೊದಲ ಎಕ್ಸ್ಪ್ರೆಸ್ವೇ ಏರ್ಸ್ಟ್ರಿಪ್ ರಚಿಸಲಾಗಿದ್ದು, ಇದರ ಪ್ರಮುಖ ವೈಶಿಷ್ಟ್ಯವಾಗಿದೆ.

ಈ ಎಕ್ಸ್ಪ್ರೆಸ್ವೇ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್), ಸಿಸಿಟಿವಿ ಕಣ್ಗಾವಲು, ತುರ್ತು ಕರೆ ಬಾಕ್ಸ್, ಆಂಬ್ಯುಲೆನ್ಸ್ಗಳು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗಸ್ತು ತಿರುಗುವ ಘಟಕಗಳನ್ನು ಸಹ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ತಯಾರಿಕಾ ಮತ್ತು ಲಾಜಿಸ್ಟಿಕ್ಸ್ ಕ್ಲಸ್ಟರ್ ಅಭಿವೃದ್ಧಿ...

ಗಂಗಾ ಎಕ್ಸ್ ಪ್ರೆಸ್ವೇಯನ್ನು ಪ್ರಮುಖ ಆರ್ಥಿಕ ಕಾರಿಡಾರ್ ಆಗಿ ಯೋಜಿಸಲಾಗಿದೆ, 12 ಜಿಲ್ಲೆಗಳಲ್ಲಿ ಸುಮಾರು 2,635 ಹೆಕ್ಟೇರ್ಗಳಲ್ಲಿ ಸಮಗ್ರ ಉತ್ಪಾದನೆ ಮತ್ತು ಲಾಜಿಸ್ಟಿಕ್ ಕಾರಿಡಾರ್ಗಳ ಅಭಿವೃದ್ಧಿಯೊಂದಿಗೆ ಸಂಯೋಜಿಸಲಾಗಿದೆ. ಹೂಡಿಕೆಯನ್ನು ಆಕರ್ಷಿಸುವ ಮತ್ತು ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಗೋದಾಮುಗಳು, ಕೋಲ್ಡ್ ಸ್ಟೋರೇಜ್ ಘಟಕಗಳು ಮತ್ತು ಆಹಾರ ಸಂಸ್ಕರಣಾ ಕೇಂದ್ರಗಳಂತಹ ಸೌಲಭ್ಯಗಳೊಂದಿಗೆ ಕಾರಿಡಾರ್ನಲ್ಲಿ ಸಮಗ್ರ ಉತ್ಪಾದನಾ ಮತ್ತು ಲಾಜಿಸ್ಟಿಕ್ಸ್ ಕ್ಲಸ್ಟರ್ಗಳನ್ನು (IMLCs) ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಎಕ್ಸ್ಪ್ರೆಸ್ವೇ ಪೂರ್ವಾಂಚಲ, ಆಗ್ರಾ-ಲಖನೌ, ಬುಂದೇಲ್ಖಂಡ್ ಮತ್ತು ಗೋರಖ್ಪುರ ಲಿಂಕ್ ಎಕ್ಸ್ಪ್ರೆಸ್ವೇಗಳು ಸೇರಿದಂತೆ ಇತರ ಪ್ರಮುಖ ಕಾರಿಡಾರ್ಗಳಿಗೆ ಸಂಪರ್ಕ ಕಲ್ಪಿಸಲಿದ್ದು , ವಿಶಾಲವಾದ ಅಂತರ್ ಸಂಪರ್ಕಿತ ಜಾಲವನ್ನು ಸೃಷ್ಟಿಸುತ್ತದೆ. ಈ ಯೋಜನೆಯು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಹೊಸ ಆರ್ಥಿಕ ಅವಕಾಶಗಳನ್ನು ತೆರೆಯುತ್ತದೆ ಮತ್ತು ಈ ಪ್ರದೇಶದಾದ್ಯಂತ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಯೋಜನೆಯು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು ಉತ್ತರ ಪ್ರದೇಶದ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖಾಂಶಗಳು:

ಒಟ್ಟು ಉದ್ದ: 594 ಕಿ.ಮೀ

ವೆಚ್ಚ: ₹36,230 ಕೋಟಿ

ಉದ್ಘಾಟನೆ: 29 ಏಪ್ರಿಲ್ 2029

ಮೊದಲ ಹಂತ: ಮೀರಠ್ನಿಂದ ಪ್ರಯಾಗರಾಜ್

ಸಂಪರ್ಕಿಸುವ ಜಿಲ್ಲೆಗಳು:

ಮೀರಠ್, ಹಾಪುರ್, ಬುಲಂದ್ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್ಪುರ, ಹರ್ದೋಯಿ, ಉನ್ನಾವೋ, ರಾಯ್ಬರೇಲಿ, ಪ್ರತಾಪ್ಗಢ ಮತ್ತು ಪ್ರಯಾಗರಾಜ್

ಪ್ರಯಾಣದ ಸಮಯ:

ಮೀರಠ್ ಮತ್ತು ಪ್ರಯಾಗರಾಜ್ ನಡುವಿನ ಪ್ರಯಾಣದ ಸಮಯವನ್ನು 10–12 ಗಂಟೆಗಳಿಂದ ಕೇವಲ 6–7 ಗಂಟೆಗಳಿಗೆ ಇಳಿಸುತ್ತದೆ.

ನಿರ್ಮಾಣದ ವಿವರ:

ಇದರಲ್ಲಿ 14 ಉದ್ದನೆಯ ಸೇತುವೆಗಳು, 7 ರೈಲ್ವೆ ಮೇಲ್ಸೇತುವೆಗಳು, 32 ಫ್ಲೈಓವರ್ಗಳು ಮತ್ತು 450ಕ್ಕೂ ಹೆಚ್ಚು ಅಂಡರ್ಪಾಸ್ಗಳಿವೆ.

ತುರ್ತು ವಿಮಾನ ನಿಲ್ದಾಣ:

ಶಹಜಹಾನ್ಪುರ ಬಳಿ ಭಾರತೀಯ ವಾಯುಪಡೆಯ ವಿಮಾನಗಳ ತುರ್ತು ಭೂಸ್ಪರ್ಶಕ್ಕಾಗಿ 3.2 ಕಿ.ಮೀ ಉದ್ದದ ಏರ್ಸ್ಟ್ರಿಪ್ ನಿರ್ಮಿಸಲಾಗಿದೆ.

ಆರ್ಥಿಕ ಅಭಿವೃದ್ಧಿ:

ಈ ಮಾರ್ಗದ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ಗಳನ್ನು ಸ್ಥಾಪಿಸಲಾಗುತ್ತಿದ್ದು, ಇದು ಸ್ಥಳೀಯ ಉದ್ಯೋಗ ಮತ್ತು ಸರಕು ಸಾಗಣೆಗೆ ಹೆಚ್ಚಿನ ವೇಗ ನೀಡಲಿದೆ.

ಪ್ರವಾಸೋದ್ಯಮ:

ಪ್ರಯಾಗರಾಜ್ನಲ್ಲಿ ನಡೆಯುವ ಮಹಾಕುಂಭ ಮೇಳಕ್ಕೆ ಬರುವ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಇದು ಸುಗಮ ಪ್ರಯಾಣದ ಅನುಕೂಲ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.