ಪಾಟ್ನ: ಸೇವೆಯೇ ಸಾಧನೆ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ದೇಶದಾದ್ಯಂತ ಸಮುದಾಯ ಆರೋಗ್ಯ ರಕ್ಷಣೆಗೆ ಶ್ರಮಿಸುವುದಾಗಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಭಾನುವಾರ ಹೇಳಿದ್ದಾರೆ.

ಬಿಹಾರದ ಸರಣ್ ಜಿಲ್ಲೆಯಲ್ಲಿ ಸುಮಾರು ₹500 ಕೋಟಿ ವೆಚ್ಚದಲ್ಲಿ ಕಣ್ಣಿನ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅದಾನಿ ಸಮೂಹದ ಅಧ್ಯಕ್ಷರು ಮತ್ತು ಅದಾನಿ ಫೌಂಡೇಶನ್ನ ಮುಖ್ಯಸ್ಥರಾಗಿರುವ ಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ ಅವರು 'ಅದಾನಿ ನೇತ್ರ ರೋಗಗಳ ಕೇಂದ್ರ' (ಅದಾನಿ ಸೆಂಟರ್ ಫಾರ್ ಐ ಡಿಸೀಸಸ್) ಮತ್ತು 'ಅದಾನಿ ನೇತ್ರ ವಿಜ್ಞಾನ ತರಬೇತಿ ಕೇಂದ್ರ'ಕ್ಕೆ (ಅದಾನಿ ಟ್ರೈನಿಂಗ್ ಸೆಂಟರ್ ಫಾರ್ ಆಪ್ತಾಲ್ಮಿಕ್ ಸೈನ್ಸಸ್) ಭೂಮಿ ಪೂಜೆ ನೆರವೇರಿಸಿದರು.

'ಅದಾನಿ ಅಖಂಡ ಜ್ಯೋತಿ ಫೌಂಡೇಶನ್' ಭಾರತದಾದ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ನೀಡಲು ಶ್ರಮಿಸಲಿದೆ’ ಎಂದು ಅದಾನಿ ಹೇಳಿದ್ದಾರೆ.

ಅದಾನಿ ಸಮೂಹವು ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ಸುಮಾರು ₹27,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಉಷ್ಣ ವಿದ್ಯುತ್ ಸ್ಥಾವರದ ಸಮೀಪ ಪೀರ್ಪೈಂಟಿಯಲ್ಲಿ ಅದಾನಿ ಫೌಂಡೇಶನ್ ವತಿಯಿಂದ 200 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಲಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅದಾನಿ, ‘ಬಿಹಾರದಲ್ಲಿ ಹುಟ್ಟಿದ ಸೇವೆಯ ಮನೋಭಾವವನ್ನು ದೇಶದಾದ್ಯಂತ ಹಿಂದುಳಿದ ಸಮುದಾಯಗಳಿಗೆ ಕೊಂಡೊಯ್ಯಲು ಅದಾನಿ ಅಖಂಡ ಜ್ಯೋತಿ ಫೌಂಡೇಶನ್ ಶ್ರಮಿಸಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.