ಪುಣೆಯ ಎಂಟು ಜನರ ತಂಡವು ಠೋಸೆಗರ್ ಜಲಪಾತ ಚಾರಣ ಮಾಡಲು ಬಂದಿತ್ತು. ಕೆಲವು ದಿನಗಳಿಂದ ವ್ಯಾಪಕ ಮಳೆಯಾಗಿದ್ದರಿಂದ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು. ಹೀಗಾಗಿ ಅಲ್ಲಿಂದ ಬೋರ್ನೆ ಘಾಟ್ ವೀಕ್ಷಣೆಗಾಗಿ ತೆರಳಿದ್ದರು.
ಯುವತಿ ಬಿದ್ದ ದೃಶ್ಯ, ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲುಜಾರಿ ಬಿದ್ದ ತಕ್ಷಣವೇ ಸ್ಥಳೀಯರು ದಪ್ಪನೆಯ ಹಗ್ಗವನ್ನು ಕೆಳಗೆ ಇಳಿಬಿಟ್ಟಿದ್ದರು. ಹೋಮ್‌ಗಾರ್ಡ್ ಅಭಿಜಿತ್ ಕೆಳಗಿಳಿದು, ಆಕೆಯನ್ನು ಮೇಲಕ್ಕೆ ಕರೆತಂದರು. ತೀವ್ರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ತಿಂಗಳು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕುಂಭೆ ಜಲಪಾತದಲ್ಲಿ ವಿಡಿಯೊ ಮಾಡುತ್ತಿದ್ದ ಪ್ರವಾಸಿ ‘ವ್ಲಾಗರ್’ 26 ವರ್ಷದ ಆನ್ವಿ ಕಾಮ್ದಾರ್ 300 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು.