ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗೋವಾದಲ್ಲಿ ಕ್ರೈಸ್ತ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ’

ತನಿಖೆ ಅಗತ್ಯವಿದೆ: ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಳ್ಳೈ
Published : 8 ಸೆಪ್ಟೆಂಬರ್ 2024, 14:34 IST
Last Updated : 8 ಸೆಪ್ಟೆಂಬರ್ 2024, 14:34 IST
ಫಾಲೋ ಮಾಡಿ
Comments

ತಿರುವನಂತಪುರ: ಗೋವಾದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ಈ ಬಗ್ಗೆ ಕಾರಣ ತಿಳಿಯಲು ಒಂದು ಸಕಾರಾತ್ಮಕ ತನಿಖೆ ಅವಶ್ಯವಿದೆ  ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಕೊಚ್ಚಿಯ ಚರ್ಚ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀಧರನ್ ಪಿಳ್ಳೈ, ಬಿಷಪ್‌ಗಳು ಕ್ರೈಸ್ತರ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

‘ಗೋವಾದಲ್ಲಿ ಕ್ರೈಸ್ತರ ಜನಸಂಖ್ಯೆಯು ಶೇಕಡಾ 36ರಿಂದ 25ಕ್ಕೆ ಇಳಿದಿದೆ. ಆದರೆ, ಮುಸ್ಲಿಂ ಜನಸಂಖ್ಯೆಯು ಶೇ 3ರಿಂದ ಶೇ 12ಕ್ಕೆ ಏರಿಕೆಯಾಗಿದೆ. ಬಿಷಪ್‌ಗಳು ಈ ಬಗ್ಗೆ ಸಕಾರಾತ್ಮಕವಾಗಿ ತನಿಖೆ ನಡೆಸಬಹುದು’ ಎಂದು ಪಿಳ್ಳೈ ಹೇಳಿದ್ದಾರೆ.

ನಂತರ ಮತ್ತೊಂದು ಸಮಾರಂಭದಲ್ಲಿ ಮಾತನಾಡಿರುವ ಪಿಳ್ಳೈ, ತಮ್ಮ ಹೇಳಿಕೆಯನ್ನು ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದರು.

ಕ್ರೈಸ್ತರ ಜನಸಂಖ್ಯೆಯ ಕುಸಿತದ ಕಾರಣಗಳ ಬಗ್ಗೆ ತಿಳಿಯಲು ಸಕಾರಾತ್ಮಕವಾದ ತನಿಖೆ ಆಗಲಿ ಎನ್ನುವುದು ತಮ್ಮ ಬಯಕೆ. ಏಕೆಂದರೆ, ಈ ರೀತಿ ಒಂದು ಧರ್ಮದ ಜನಸಂಖ್ಯೆ ಕುಸಿಯಲು ಸುಶಿಕ್ಷಿತ ಜನರ ವಲಸೆ ಕೂಡ ಕಾರಣವಿರಬಹುದು ಎಂದೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT