ಪಣಜಿ: 'ಮ್ಹಾಜೆ ಘರ್' ಯೋಜನೆಯಡಿ 5,000ಕ್ಕೂ ಹೆಚ್ಚು ಮನೆಗಳನ್ನು ಸಕ್ರಮಗೊಳಿಸಲು ಗೋವಾ ಸರ್ಕಾರವು ಶೀಘ್ರದಲ್ಲೇ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬುಧವಾರ(ಜೂನ್ 3) ತಿಳಿಸಿದ್ದಾರೆ.

ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಸಾವಂತ್, ಮ್ಹಾಜೆ ಘರ್ ಯೋಜನೆಯು ಬಹಳ ದಶಕಗಳ ಹಿಂದೆಯೇ ಸರ್ಕಾರಿ ಭೂಮಿಯಲ್ಲಿ ನೆಲೆಸಿರುವ ನಿವಾಸಿಗಳಿಗೆ ಕಾನೂನುಬದ್ಧವಾಗಿ ಮಾಲಿಕತ್ವ ಹಕ್ಕನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈಗಾಗಲೇ 3,000 ಸಕ್ರಮ ಆದೇಶಗಳು ಸಿದ್ಧವಾಗಿದೆ. ಮಾರ್ಗೋವಾದಲ್ಲಿರುವ ರವೀಂದ್ರ ಭವನದಲ್ಲಿ ಜೂನ್ 3ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ 1,000 ಜನರಿಗೆ ಸಕ್ರಮ ಆದೇಶ ಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.