ಗೋರಖ್ಪುರ: ಪತ್ನಿ ಟಿ ಶರ್ಟ್ ಧರಿಸುತ್ತಾಳೆ ಎಂಬ ಕಾರಣಕ್ಕೆ ಪತಿ ಆಕೆಯನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಜಿಲ್ಲೆಯ ಮುಕರಿಪುರ ಗ್ರಾಮದ ನಿವಾಸಿ ಶಾದಾಬ್ ಮತ್ತು ಮುಂಬೈ ಮೂಲದ ನಿಖತ್ ಆರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ನಿಖತ್ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ಮುಂಬೈನಲ್ಲಿ ಬೆಳೆದಿದ್ದ ನಿಖತ್ ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿದ್ದರು. ಮದುವೆಯ ನಂತರ ಹಳ್ಳಿಯ ಜೀವನಕ್ಕೆ ಹೊಂದಿಕೊಳ್ಳಲು ಅವರಿಗೆ ಕಷ್ಟವಾಗುತ್ತಿತ್ತು. ವಿಶೇಷವಾಗಿ ಉಡುಗೆ-ತೊಡುಗೆಯ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆ ಇಬ್ಬರ ಮೃತದೇಹಗಳು ಅವರ ಕೋಣೆಯಲ್ಲಿ ಪತ್ತೆಯಾಗಿದ್ದವು. ನಿಖತ್ ಮೃತದೇಹ ಮಂಚದ ಮೇಲೆ ಬಿದ್ದಿದ್ದರೆ, ಶಾದಾಬ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ವಾಟ್ಸಾಪ್ ಚಾಟ್ನಿಂದ ಬಯಲಾಯಿತು ಅಸಲಿ ಸತ್ಯ

ಪೊಲೀಸರು ಆರಂಭದಲ್ಲಿ ಇದೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣ ಎಂದು ಭಾವಿಸಿದ್ದರು. ಆದರೆ, ಮೃತರ ವಾಟ್ಸಾಪ್ ಚಾಟ್ಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪತ್ನಿ ಟಿ ಶರ್ಟ್ ಧರಿಸುವುದಕ್ಕೆ ಶಾದಾಬ್ ತೀವ್ರ ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ನಿಖತ್ ತಮಗೆ ಇಷ್ಟಬಂದ ಉಡುಗೆ ತೊಡುವುದಾಗಿ ಪಟ್ಟು ಹಿಡಿದಿದ್ದರು.

‘ನಮ್ಮ ಸಮುದಾಯದಲ್ಲಿ ಹೆಣ್ಣುಮಕ್ಕಳು ಇಂತಹ ಬಟ್ಟೆಗಳನ್ನು (ಟಿ ಶರ್ಟ್) ಧರಿಸುವುದಿಲ್ಲ. ನೀನು ನನ್ನ ಜೊತೆ ಬದುಕಬೇಕೆಂದರೆ ಇವುಗಳನ್ನು ತೊಡುವುದನ್ನು ಬಿಡಬೇಕು’ ಎಂಬುದಾಗಿ ಶಾದಾಬ್ ತಾಕೀತು ಮಾಡಿರುವುದು ಮತ್ತು ಅದಕ್ಕೆ ಪ್ರತಿಯಾಗಿ ನಿಖತ್ ಅವರು ‘ನಾನು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ಇರುವವಳಲ್ಲ’ ಎಂದು ಉತ್ತರಿಸಿರುವ ಸಂದೇಶಗಳೂ ಪತ್ತೆಯಾಗಿದೆ.

ಇದೇ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿದ್ದು, ಶಾದಾಬ್ ಮೊದಲು ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಅದೇ ಕೋಣೆಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.