ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ: 4 ವರ್ಷದಲ್ಲಿ ಯುಜಿಯಷ್ಟೇ ಪಿಜಿ ಸೀಟು

Last Updated 12 ಫೆಬ್ರುವರಿ 2023, 21:07 IST
ಅಕ್ಷರ ಗಾತ್ರ

ಗಾಂಧಿನಗರ : ಪದವಿ ಹಾಗೂ ಸ್ನಾತಕೋತ್ತರ ಪದವಿ ವೈದ್ಯಕೀಯ ಸೀಟುಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಸಮಬಲಕ್ಕೆ ತರಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಎಂಬಿಬಿಎಸ್‌ ಪದವೀಧರರು ಪಿಜಿ ಕೋರ್ಸ್‌ಗಳನ್ನು ಸುಲಭವಾಗಿ ಮುಂದುವರಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ.

ಇಲ್ಲಿ ನಡೆದ ಗ್ಲೋಬಲ್ ಅಸೋಸಿಯೇಷನ್ ಆಫ್‌ ಫಿಜಿಷಿಯನ್ಸ್ ಆಫ್ ಇಂಡಿಯನ್‌ ಆರಿಜಿನ್‌ನ (ಜಿಎಪಿಐಒ) 13ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂಶೋಧನೆ ಮತ್ತು ಆಸ್ಪತ್ರೆಗಳನ್ನು ತೆರೆಯಲು ಅನಿವಾಸಿ ಭಾರತೀಯ ಆರೋಗ್ಯ ವೃತ್ತಿಪರರಿಗೆ ಆಹ್ವಾನ ನೀಡಿದರು.

ಈ ವರ್ಷದ ಏಪ್ರಿಲ್‌–ಮೇ ನಲ್ಲಿ ನಡೆಯಲಿರುವ ‘ಹೀಲ್‌ ಬೈ ಇಂಡಿಯಾ’, ‘ಹೀಲ್ ಇನ್ ಇಂಡಿಯಾ’ ಎಕ್ಸ್‌ಪೋದಲ್ಲಿ 70ಕ್ಕೂ ಹೆಚ್ಚು ದೇಶಗಳು ‘ಆಸ್ಪತ್ರೆಯಿಂದ ಆಸ್ಪತ್ರೆಗೆ’, ‘ದೇಶದಿಂದ ದೇಶಕ್ಕೆ’ ಮತ್ತು ‘ದೇಶದಿಂದ ಆಸ್ಪತ್ರೆಗೆ’ ಎಂಬ ಒ‍ಪ್ಪಂದಕ್ಕೆ ಸಹಿ ಹಾಕಲಿವೆ ಎಂದರು.

‘ಆಸ್ಪತ್ರೆಗಳನ್ನು ತೆರೆದಾಗ ನಮಗೆ ವೈದ್ಯರ ಅಗತ್ಯ ಇರುತ್ತದೆ. 8 ವರ್ಷದ ಹಿಂದೆ ಭಾರತದಲ್ಲಿ 51,000 ಎಂಬಿಬಿಎಸ್‌ ಸೀಟುಗಳಿದ್ದವು. ಆದರೆ ಈಗ 1,00,226ಕ್ಕೆ ಏರಿಕೆಯಾಗಿದೆ. ಸ್ನಾತಕೋತ್ತರ ಸೀಟುಗಳು 34,000 ದಿಂದ 64,000ಕ್ಕೆ ಏರಿಕೆ ಆಗಿವೆ’ ಎಂದರು.

ಎಂಬಿಬಿಎಸ್‌ ಯುಜಿ ಮತ್ತು ಪಿಜಿ ಸೀಟುಗಳನ್ನು ಸಮಬಲಕ್ಕೆ ತರುವ ಗುರಿ ಹೊಂದಿದ್ದೇವೆ. ಎಲ್ಲ ವೈದ್ಯರು ಅತ್ಯುತ್ತಮ ಆರೋಗ್ಯ ಶಿಕ್ಷಣ ಪಡೆಯಬೇಕು. 'ಹೀಲ್ ಇನ್ ಇಂಡಿಯಾ' ಅಡಿಯಲ್ಲಿ, ‘ಜಗತ್ತನ್ನು ಭಾರತಕ್ಕೆ ಆಹ್ವಾನಿಸುವುದು’ ಮತ್ತು ‘ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆ, ಕ್ಷೇಮ ಮತ್ತು ಸಾಂಪ್ರದಾಯಿಕ ಔಷಧವನ್ನು ನೀಡುವ’ ಯೋಜನೆ ಇದೆ. ಇದರ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಇದಕ್ಕೆ ಗುಜರಾತ್ ಅತ್ಯುತ್ತಮ ತಾಣವಾಗಿದೆ ಎಂದು ಮಾಂಡವಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT