ಗುಡಿಬಂಡೆ: ಎಲ್ಲಾ ಸರ್ಕಾರಿ ನೌಕರರಿಗೆ ಮೊಟ್ಟ ಮೊದಲು ಬಡ್ತಿ ಜಾರಿ ಮಾಡಿದ ಕೀರ್ತಿ ಡಾ.ಬಾಬು ಜಗಜೀವನ್ ರಾಂ ಅವರಿಗೆ ಸಲ್ಲಿತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸುಬ್ಬರಾಯಪ್ಪ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ 119ನೇ ಜಯಂತಿಯಲ್ಲಿ ಮಾತನಾಡಿದರು.

ಅಂದಿನ ಕಾಲದಲ್ಲಿ ರೈಲ್ವೆ ಇಲಾಖೆಯಲ್ಲಿ ಮೇಲ್ಜಾತಿ ನೌಕರರಿಗೆ ಮಾತ್ರ ಬಡ್ತಿ ನೀಡುವ ವ್ಯವಸ್ಥೆ ಇತ್ತು. ದಲಿತ ನೌಕರರಿಗೆ ಬಡ್ತಿ ನೀಡುತ್ತೀರಲಿಲ್ಲ. ಬಾಬೂಜಿ ನ್ಯಾಯಾಲಯ ಮೊರೆಹೋಗಿ ಎಲ್ಲಾ ಸರ್ಕಾರಿ ನೌಕರರಿಗೆ ಬಡ್ತಿ ನೀಡಬೇಕೆಂಬ ಆದೇಶ ಹೊರ ಬರಲು ಕಾರಣರಾದರು. ಇದರ ಫಲವನ್ನು ಇಂದು ಎಲ್ಲ ವರ್ಗದ ಸರ್ಕಾರಿ ನೌಕರರು ಅನುಭವಿಸುತ್ತಿದ್ದಾರೆ. ಆದರೆ ಈ ಮಹನೀಯರು ಹಾಕಿಕೊಟ್ಟ ದಾರಿ ಬಿಟ್ಟು ಈ ಸಮಾಜ ಮತ್ತೊಂದು ದಾರಿಯಲ್ಲಿ ಸಾಗುತ್ತೀದೆ ಎಂದು ಬೇಸರಿಸಿದರು.

ತಾ.ಪಂ ಇಒ ನಾಗಮಣಿ ಮಾತನಾಡಿದರು. ದಲಿತ ಕಲಾ ಮಂಡಳಿಯಿಂದ ಕ್ರಾಂತಿ ಗೀತೆ ಗಾಯನ ನಡೆಯಿತು.

ಬಿಇಒ ಕೃಷ್ಣ ಕುಮಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ , ಗ್ರೇಡ್ -2 ತಹಶೀಲ್ದಾರ್ ತುಳಸಿ, ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಶ್ರೀರಾಮಪ್ಪ, ರೇಷ್ಮೆ ಇಲಾಖೆ ಗಂಗರಾಜು , ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರತಿ, ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣ ,ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಚೆಂಡೂರು ರಮಣ , ಜೀವಿಕಾ ನಾರಾಯಣಸ್ವಾಮಿ, ಎಂಜಿನಿಯರ್ ಇಲಾಖೆ ವೆಂಕಟರೋಣಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-16-1830808034

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.